ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ, ಆಗೆಯೇ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮೇಲೆ ಜೆಡಿಎಸ್ ಅಕಾಂಕ್ಷಿ ಅಭ್ಯರ್ಥಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ವಿ.ಎನ್. ಮಂಜುನಾಥ್ ಸಹ ಜೆಡಿಎಸ್ ಅಭ್ಯರ್ಥಿಯಾಗಿ ಗುರುತಿಸಿಕೊಳ್ಳುತ್ತಿರುವುದು ಜೆಡಿಎಸ್ ಅಭ್ಯರ್ಥಿಗಳ ತಳಮಳ ಹೆಚ್ಚಿಸಿದೆ.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿ.ಎನ್.ಮಂಜುನಾಥ್ 2003ರಿಂದ ಶಾಸಕರಾಗುವ ಕನಸು ಕಾಣುತ್ತಿದ್ದಾರೆ. 2003 ಮತ್ತು 2013 ರ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಜೆಡಿ ಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದರು, ಆದರೆ ಕೊನೆಗಳಿಗೆಯಲ್ಲಿ ಜೆಡಿಎಸ್ ವರಿಷ್ಠರ ಮಾತಿಗೆ ಮಣಿದು ಕಣದಿಂದ ಹಿಂದೆ ಸರಿದರು. 2023 ರ ಚುನಾವಣೆಯಲ್ಲಿ ದೊಡ್ಡಬಳ್ಳಾಪುರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಖುದ್ದು ಕುಮಾರಸ್ವಾಮಿಯವರೇ ಸೂಚನೆ ನೀಡಿದ್ದಾರಂತೆ.
ದೊಡ್ಡಬಳ್ಳಾಪುರ ಜೆಡಿಎಸ್ ಭದ್ರಕೋಟೆ ಆದರೆ ಅಭ್ಯರ್ಥಿಗಳ ಆಯ್ಕೆ ಮತ್ತು ಪಕ್ಷದಲ್ಲಿನ ಗೊಂದಲದಿಂದ ಜೆಡಿಎಸ್ ಅಭ್ಯರ್ಥಿಗಳು ಸೊಲುತ್ತಿದ್ದಾರೆ. 2023ರ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಗಳ ದೊಡ್ಡ ಲಿಸ್ಟ್ ಇದೆ, ಕಳೆದ ಮೂರು ಚುನಾವಣೆಯಲ್ಲಿ ಸೋತಿರುವ ಮುನೇಗೌಡ, ರಮೇಶ್ ಗೌಡ, ಕರೀಗೌಡ ಇದರ ಜೊತೆಗೆ ವಿ.ಎನ್.ಮಂಜುನಾಥ್ ಸಹ ಅಭ್ಯರ್ಥಿಗಳ ರೇಸ್ ನಲ್ಲಿ ಇದ್ದಾರೆ. ಇವರಲ್ಲಿ ಯಾರ ಪಾಲಿಗೆ ಜೆಡಿಎಸ್ ಟಿಕೇಟ್ ಸಿಗುತ್ತೋ ಅದು ಕುಮಾರಸ್ವಾಮಿ ತಿರ್ಮಾನದ ಮೇಲಿದೆ.
Kshetra Samachara
11/06/2022 05:53 pm