ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆರೋಗ್ಯ ತಪಾಸಣೆಗೆ ಸಿಂಗಾಪುರಕ್ಕೆ ತೆರಳಿದ್ದ ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್

ಬೆಂಗಳೂರು : ಜನತಾ ಜಲಧಾರೆ ಕಾರ್ಯಕ್ರಮದ ಸಲುವಾಗಿ ರಾಜ್ಯ ಪ್ರವಾಸ ಮಾಡಿ ಧಣಿದಿದ್ದೆ, ರಿಲ್ಯಾಕ್ಸ್ ಗಾಗಿ ಪೂರ್ವ ನಿಗಧಿಯಂತೆ ಸಿಂಗಾಪುರಕ್ಕೆ ಹೋಗಿ ವಾಪಸ್ಸಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಡರಾತ್ರಿ ಸಿಂಗಪುರದಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ರಾಜಕಾರಣದ ಅಸಮಧಾನಕ್ಕೆ ವಿದೇಶಕ್ಕೆ ಹೋಗಿಲ್ಲ. ಕುಪೇಂದ್ರ ರೆಡ್ಡಿ ರಾಷ್ಟ್ರಾಧ್ಯಕ್ಷರ ಸಮ್ಮುಖದಲ್ಲಿ ಚರ್ಚೆಮಾಡಿ ನಾಮಪತ್ರ ಸಲ್ಲಿಸಿದ್ದಾರೆ. ನಾಳೆಯಿಂದ 4ದಿನ ಹುಬ್ಬಳ್ಳಿ ಕಡೆ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದರು.

ರಾಜ್ಯಸಭೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಚುನಾವಣೆ ಸಂಬಂಧ ಯಾವುದೇ ಪಕ್ಷದ ನಾಯಕರ ಜೊತೆ ನಾನು ಚರ್ಚೆ ಮಾಡಿಲ್ಲ.

ಕಾಂಗ್ರೆಸ್ ನಾಯಕರು ಅವರದ್ದೆ ಪ್ರತಿಕ್ರಿಯೆ ಕೊಟ್ಟಿದ್ದಾರೆ, ಕೊಡಲಿ ಎಂದರು.

ಇದೇ ವೇಳೆ JDS ಪಕ್ಷ 2023ರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ವರ್ಧೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ಅಧಿಕಾರಕ್ಕಾಗಿ ರಾಜಕೀಯದಲ್ಲಿ ಏನೆಲ್ಲಾ ಆಗಲಿವೆ ಎಲ್ಲರಿಗೂ ಗೊತ್ತೆ ಇದೆ. ಸಮ್ಮಿಶ್ರ ಸರ್ಕಾರದ ಅಸ್ಥಿತ್ವಕ್ಕಾಗಿ ಒಂದಾಗಿದ್ದ JDS & ಕಾಂಗ್ರೆಸ್ ಪಕ್ಷಗಳು ರಾಜ್ಯಸಭೆಯ ಅಭ್ಯರ್ಥಿಗಳ ಗೆಲುವಿಗಾಗಿ ವಿವಿದ ಕಸರತ್ತು ನಡೆಸುತ್ತಿರುವುದು ಎರಡೂ ಕಡೆ ನಾಯಕರ ಹೇಳಿಕೆಗಳಿಂದ ಸ್ಪಷ್ಟವಾಗ್ತಿದೆ ಎಂದರು.

ಸುರೇಶ್ ಬಾಬು Public Next ದೇವನಹಳ್ಳಿ.

Edited By :
PublicNext

PublicNext

04/06/2022 08:17 am

Cinque Terre

39.57 K

Cinque Terre

1

ಸಂಬಂಧಿತ ಸುದ್ದಿ