ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯ & ಕೇಂದ್ರ ಆಳುವ ಸರ್ಕಾರಗಳಿಂದ ಜನಜೀವನ ಬರ್ಬಾದ್!

ಯಲಹಂಕ: ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷಗಳಲ್ಲಿ ಆಡಳಿತ ವೈಫಲ್ಯದಿಂದ ಜನಜೀವನ ನರಕವಾಗಿದೆ ಎಂದು ಕೆಪಿಸಿಸಿ ವಕ್ತಾರ ಮಂಜುನಾಥ ಅದ್ದೆ ವಾಗ್ದಾಳಿ ನಡೆಸಿದರು.

ಯಲಹಂಕದ ಮಾಧ್ಯಮ ಕೇಂದ್ರದಲ್ಲಿ "ಆಳುವ ಸರ್ಕಾರಕ್ಕೆ ಜನ ಸಾಮಾನ್ಯರ ಪ್ರಶ್ನೆ" ಎಂಬ ವಿಷಯಗಳ ಮೇಲೆ ಯಲಹಂಕ ಕ್ಷೇತ್ರದ ಕಾಂಗ್ರೆಸ್ ಪಕ್ಷ, ರೈತಸಂಘ, ದಲಿತ ಸಂಘಟನೆ ಸುದ್ದಿಗೋಷ್ಟಿಲಿ ರಾಜ್ಯ & ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಪ್ರಶ್ನಿಸಿದರು. 2013 & 2018ರ ಭರವಸೆಯಂತೆ ಜಿಡಿಪಿ ವೃದ್ದಿಯಾಗಿದೆಯೇ? ರೈತರು ಉತ್ಪನ್ನಕ್ಕೆ ನ್ಯಾಯ ಬೆಲೆ ಪಡೆದರೆ? ಕಪ್ಪು ಹಣ ಪ್ರತಿ ಕುಟುಂಬಕ್ಕೆ ತಲುಪಿತೆ? ಪೆಟ್ರೋಲ್, ಡೀಸೆಲ್ ಬೆಲೆ 50 ರೂಪಾಯಿ ತಲುಪದ ನಿಯಮವೆಲ್ಲಿ? ಇಂಥ ಪ್ರಶ್ನೆಗಳಿಗೆ ಆಳುವ ಸರ್ಕಾರ ಉತ್ತರಿಸಬೇಕಿದೆ ಎಂದರು.

ಸಿಲಿಂಡರ್ ಬೆಲೆ 480ರೂ. ಇದ್ದಾಗ ಬಿಜೆಪಿ ಟೀಂ ಪ್ರತಿಭಟಿಸಿ ಪೆಟ್ರೊಲ್ ಡಿಸೇಲ್ ಬೆಲೆ 50ರ ಗಡಿದಾಟದು ಎಂದಿದ್ದರು. ಇದೀಗ, ಪೆಟ್ರೋಲ್ 100ರ ಗಡಿದಾಟಿ ಗಗನಕ್ಕೇರಿದೆ. ಜಿಎಸ್‌ಟಿ ಬರೆ ಎಳೆದಿರುವ ಜೊತೆಗೆ ದೇಶದಲ್ಲಿ ಶೇ.24ರಷ್ಟು ವಸತಿ ವಂಚಿತರಿದ್ದಾರೆ. ಇಂತಹ ಬಡಜನರ ಪಾಡೇನು. 2012-13ರಲ್ಲಿ ಪ್ರತಿ ಪ್ರಜೆ ಮೇಲಿದ್ದ ಸರ್ಕಾರಿ ಸಾಲ 57,692 ರೂಪಾಯಿ. ಇಂದು 2022 ಮಾರ್ಚ್ 31ಕ್ಕೆ 1,70,290 ರೂ. ತಲುಪಿ ಮೂರು ಪಟ್ಟು ಹೆಚ್ಚಾಗಿದೆ. ಇಂದು ದೇಶದ ರೈತರ ಖಾಸಗಿ ಸಾಲ 1,60,000 ಕೋಟಿ ಹೆಚ್ಚಾಗಿದೆ. “ಮೇಕ್ ಇನ್ ಇಂಡಿಯಾ” ಸ್ಮಾರ್ಟ್ ಸಿಟಿಗಳ ಕಥೆ ಏನಾಯಿತು? ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರ ಅಧಿಕಾರ ಬಂದ 100 ದಿನಗಳಲ್ಲಿ ಕಪ್ಪುಹಣ ತಂದು ದೇಶದ ಪ್ರತಿ ಕುಟುಂಬಕ್ಕೂ ತಲಾ 15 ಲಕ್ಷದಂತೆ ಹಂಚ್ತೇವೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸ್ತೇವೆ ಎಂದಿದ್ರು. ಈಗ ದೇಶದಲ್ಲಿ 37ಕೋಟಿ ಯುವಕರಿಗೆ ಉದ್ಯೋಗವಿಲ್ಲ. ಬುರುಡೆ ಬುಲೆಟ್ ಟ್ರೈನ್ ಏನಾಯ್ತು.? ದೇಶದ ಆರ್ಥಿಕತೆ ಪಾತಾಳಕ್ಕಿಳಿದಿದೆ. ರಾಜ್ಯ & ದೇಶದಲ್ಲಿ ವಿದ್ಯಾಭ್ಯಾಸ & ಆರೋಗ್ಯ ಸೇವೆ ವ್ಯಾಪಾರೀಕರಣ ಆಗಿ‌ ಜನ ಪರದಾಡ್ತಿದ್ದಾರೆ ಎಂದು ದಲಿತ ಸಂಘಟನೆ ತಮ್ಮ‌ ಆಕ್ರೋಶ ಹೊರಹಾಕಿದೆ.

ರಾಜ್ಯ ಮತ್ತು ‌ಕೇಂದ್ರ ಸರ್ಕಾರ ಜನ ಸಾಮಾನ್ಯನ ಬೆನ್ನು ಮೂಳೆ ಮುರಿತಿವೆ. ಪೆಟ್ರೋಲಿಯಂ ಉತ್ಪನ್ನ, ದಿನಬಳಕೆ ವಸ್ತು ಬೆಲೆ ಗಗನಕ್ಕೇರಿದೆ. ಆದ್ದರಿಂದ ಸರ್ಕಾರ ಜನಪರವಾಗಿರಬೇಕು. ಇಲ್ಲವಾದರೆ ಜನರೆ ಬುದ್ದಿ ಕಲಿಸಿಲಿದ್ದಾರೆ ಎಂದು ಆಳುವ ಸರ್ಕಾರಗಳಿಗೆ ವಿವಿಧ ಸಂಘಟನೆ ಎಚ್ಚರಿಕೆ ನೀಡಿವೆ

ಸುರೇಶ್ ಬಾಬು Public Next ಯಲಹಂಕ.

Edited By : Nagesh Gaonkar
PublicNext

PublicNext

29/05/2022 09:54 pm

Cinque Terre

37.63 K

Cinque Terre

9

ಸಂಬಂಧಿತ ಸುದ್ದಿ