ಆನೇಕಲ್ : ಡಿಜಿಟಲ್ ಇಂಡಿಯಾದ ಪಿತಾಮಹ, ಆಧುನಿಕ ಭಾರತದ ತಂತ್ರಜ್ಞಾನದ ನಿರ್ಮಾತೃ ಮಾಜಿ ಪ್ರಧಾನಿ ಭಾರತರತ್ನ ದಿವಂಗತ ಶ್ರೀ ರಾಜೀವ್ ಗಾಂಧೀಜೀ ರವರ 31 ನೇ ವರ್ಷದ ಪುಣ್ಯಸ್ಮರಣೆಯ ಈ ದಿನದಂದು ಅವರನ್ನು ನೆನೆದು ಗೌರವ ನಮನಗಳನ್ನು ಸಲ್ಲಿಸುತ್ತಿದ್ದೇವೆ.. ಎಂದು ಅನೇಕಲ್ ಶಾಸಕ ಶಿವಣ್ಣ ತಿಳಿಸಿದರು.
ಆನೇಕಲ್ ಪಟ್ಟಣದ ಚಂದಾಪುರ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದ ದಿವಂಗತ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಇನ್ನು ಈ ಕಾರ್ಯಕ್ರಮದಲ್ಲಿರಾಜೀವ್ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವುದರ ಮೂಲಕ ಗೌರವ ಸಲ್ಲಿಸಿದರು ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ದೇಶದಲ್ಲಿ ಐಟಿ ಉದ್ಯಮ, ದೂರ ಸಂಪರ್ಕ ಕ್ರಾಂತಿ ಮಾಡಿದ ಖ್ಯಾತಿ ರಾಜೀವ ಗಾಂಧಿ ಅವರಿಗೆ ಸಲ್ಲುತ್ತದೆ.
ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೈಗೊಂಡ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಆಡಳಿತ ಶೈಲಿ, ಬಡ ಜನರ ಕಾಳಜಿ ನಮಗೆಲ್ಲ ಪ್ರೇರಣೆಯಂತಿವೆ ಎಂದು ಶಾಸಕ ಶಿವಣ್ಣ ತಿಳಿಸಿದರು ಇನ್ನು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.
Kshetra Samachara
21/05/2022 10:41 pm