ಆನೇಕಲ್: ಆನೇಕಲ್ ತಾಲೂಕಿನ ಕರ್ಪೂರ ಗ್ರಾಮ ಪಂಚಾಯಿತಿ ಕಚೇರಿಗೆ ಸದಸ್ಯನೇ ಬೀಗ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗವೊಂದು ನಡೆದಿದೆ.
ಹೌದು. ಕರ್ಪೂರ ಗ್ರಾಮ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷ ಪಿ ರಾಜು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿ ಕರ್ಪೂರ ಗ್ರಾಮದ ಹಾಲ್ದೇನಹಳ್ಳಿ ಸದಸ್ಯ ತಿಮ್ಮರಾಜು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿಗೆ ಬೀಗ ಹಾಕಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಅರಿತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಕರ್ಪೂರ ಗ್ರಾಮದ ಹಾಲ್ದೇನಹಳ್ಳಿ ಸದಸ್ಯ ಮಾತನಾಡಿ, 'ಒಬ್ಬ ಜವಾಬ್ದಾರಿ ಇರುವಂತ ಸ್ಥಾನದಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಅನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವೆ. ನಾನು ಕಾನೂನು ಹೋರಾಟ ಮಾಡುತ್ತೇನೆ. ಮಾನವ ಮೊಕದ್ದಮೆ ಪ್ರಕರಣ ಸಹ ದಾಖಲಿಸುವೆ. ಅಧ್ಯಕ್ಷರ ಅವಹೇಳನಕಾರಿ ಮಾತುಗಳು ಮತ್ತು ದುರ್ವರ್ತನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದೇನೆ. ಸದಸ್ಯತ್ವ ರದ್ದು ಮಾಡುವಂತೆ ಮನವಿ ಮಾಡಿದ್ದೇನೆ. ಇದಕ್ಕಾಗಿ ಕಾನೂನು ಹೋರಾಟ ಮಾಡುವೆ ಎಂದು ತಿಮ್ಮರಾಜು ಕಿಡಿಕಾರಿದ್ದಾರೆ.
Kshetra Samachara
18/05/2022 11:05 pm