ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸುಪ್ರೀಂ ಅಂಗಳದಲ್ಲಿ ಬಿಬಿಎಂಪಿ ಚುನಾವಣೆ ಚೆಂಡು !

ಎಕ್ಸ್ ಕ್ಲೂಸಿವ್ ರಿಪೋರ್ಟ್ - ಗಣೇಶ್ ಹೆಗಡೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಭವಿಷ್ಯ ಇದೀಗ ಸುಪ್ರೀಂ ಕೋರ್ಟ್ ಕೈಯಲ್ಲಿ ಇದೆ. ಮಧ್ಯ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಬಾಕಿಯಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲೇಬೇಕೆಂದು ಖಡಕ್ ಆದೇಶ ನೀಡಿದ್ದರೂ ಸದ್ಯಕ್ಕೆ ತಾಂತ್ರಿಕವಾಗಿ ಅದು ಬಿಬಿಎಂಪಿ ಗೆ ಅನ್ವಯವಾಗೋದಿಲ್ಲ. ಏಕೆಂದರೆ ಸುಪ್ರೀಂ ಕೋರ್ಟ್ 2020ರ ಡಿಸೆಂಬರ್ 18 ರಂದು ಪಾಲಿಕೆ ಚುನಾವಣೆ ನಡೆಸಬೇಕೆನ್ನುವ ಹೈಕೋರ್ಟ್ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ತೆರವಾಗಿಲ್ಲ. ಹಾಗಾಗಿ ಬಿಬಿಎಂಪಿ ಚುನಾವಣೆ ನಡೆಸಲು ತಾಂತ್ರಿಕ ಅಡ್ಡಿ ಇದ್ದೇ ಇದೆ.

ಬಿಬಿಎಂಪಿ ಚುನಾವಣೆ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ನಡೆಯಿತು. ಸಚಿವ ಆರ್.ಅಶೋಕ್ ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಸಚಿವರು ಭಾಗಿ ಯಾಗಿದ್ದರು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಚರ್ಚೆಗಳು ಆಗಿವೆ.ಅಲ್ಲದೆ ಚುನಾವಣೆ ನಡೆಸುವ ಬಗ್ಗೆ ಸರ್ಕಾರದ ನಿಲುವು ಏನಿರಬೇಕು, ಸುಪ್ರೀಂ ‌ಕೋರ್ಟ್ ಆದೇಶ ಬಿಬಿಎಂಪಿ ಗೆ ಅನ್ವಯ ಆಗುತ್ತಿಲ್ಲವಾದರೇ ಮುಂದಿನ ಹಾದಿ ಏನು , ಎಂಬುದೆಲ್ಲದರ ಬಗ್ಗೆ ವಿಸ್ತೃತ ಚರ್ಚೆ ಇಂದು ನಡೆದಿದೆ.

ಪಬ್ಲಿಕ್ ನೆಕ್ಷ್ಟ್ ಗೆ ದೊರೆತ ಮಾಹಿತಿಗಳ ಪ್ರಕಾರ, ಸದ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಯುವುದು ಕಷ್ಟ. ಸುಪ್ರೀಂ ಕೋರ್ಟ್ ನಲ್ಲಿ ಇರುವ ತಡೆಯಾಜ್ಞೆ ತೆರವು ಆಗಬೇಕು.ಇಲ್ಲ‌ ಕೋರ್ಟ್ ಆ ಬಗ್ಗೆ ತೀರ್ಪು ಪ್ರಕಟಿಸಬೇಕು, ಹಾಗಿದ್ದಲ್ಲಿ ಮಾತ್ರ ಚುನಾವಣೆ ಸಾಧ್ಯವಾಗುತ್ತದೆ. ಈ ಬಗ್ಗೆ ಚುನಾವಣೆ ಆಯುಕ್ತರು ಕೂಡಾ ಅದನ್ನೇ ಪಬ್ಲಿಕ್ ನೆಕ್ಷ್ಟ್ ಗೆ ತಿಳಿಸಿದ್ದಾರೆ.

Edited By : Shivu K
PublicNext

PublicNext

12/05/2022 08:06 pm

Cinque Terre

40.48 K

Cinque Terre

0

ಸಂಬಂಧಿತ ಸುದ್ದಿ