ವರದಿ-ಗಣೇಶ್ ಹೆಗಡೆ
ಬೆಂಗಳೂರು: ಸಹಕಾರ ಸಚಿವ ಎಸ್.ಟಿ ಸೊಮಶೇಖರ್ ಅವರಿಗೆ ಬಿಡಿಎ ಅಧ್ಯಕ್ಷರ ಬಂಗಲೆಯ ಮೇಲೆ ವ್ಯಾಮೋಹವೇ..? ಹೀಗೊಂದು ಚರ್ಚೆ, ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿಬರ್ತಿದೆ.
ಹೌದು.. ಕಳೆದ ಮೂರು ವರ್ಷದಿಂದ ಆ ಬಂಗಲೆಯಲ್ಲೇ ಸಚಿವ ಸೋಮಶೇಖರ್ ವಾಸವಾಗಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬಿಡಿಎ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎಸ್.ಟಿ ಸೋಮಶೇಖರ್ ಅವರಿಗೆ ಮನೆ ನೀಡಲಾಗಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮೀಸಲಿಟ್ಟ ಮನೆ ಇದಾಗಿದೆ.
ಅದಾದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸಹಕಾರ ಸಚಿವರು ಕೂಡಾ ಆಗಿದ್ದಾರೆ. ಅದರೂ ಬಿಡಿಎ ಬಂಗಲೆ ತೊರೆಯಲು ಸಚಿವ ಎಸ್‌ಟಿ ಸೋಮಶೇಖರ್ ಹಿಂದೆ-ಮುಂದೆ ನೋಡುತ್ತಿದ್ದಾರೆ.
ಈ ಬಗ್ಗೆ ಎಸ್ ಟಿ ಎಸ್ ಅವರನ್ನು ಕೇಳಿದ್ರೆ ಬಿಡಿಎದವ್ರು ಕೇಳಲಿಲ್ಲ. ನಾನೂ ಬಿಟ್ಟಿಲ್ಲ ಅಂತಾರೆ. ಇತ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೂಡ ಸಚಿವರಿಗೆ ಮನೆ ಖಾಲಿ ಮಾಡುವಂತೆ ಸೂಚಿಸುತ್ತಿಲ್ಲ. ಇನ್ನೂ ಮನೆಯ ಎಲೆಕ್ಟ್ರಿಕ್ ಬಿಲ್, ವಾಟರ್ ಬಿಲ್ ಸೇರಿದಂತೆ ಅದರ ನಿರ್ವಹಣೆಯನ್ನು ಬಿಡಿಎ ಪಾವತಿ ಮಾಡುತ್ತಿದೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಕೂಡಾ ಆರಂಭವಾಗಿದೆ.
Kshetra Samachara
11/05/2022 04:18 pm