ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼಯಲಹಂಕ ಕೆರೆ ಅಭಿವೃದ್ಧಿ ಪರ್ವʼ; ಶಾಸಕ ವಿಶ್ವನಾಥ್ ಕಾಮಗಾರಿ ವೀಕ್ಷಣೆ

ಯಲಹಂಕ: ನಂದಿಬೆಟ್ಟ ಸಮೀಪದ ಚೆನ್ನಗಿರಿ ಬೆಟ್ಟದಲ್ಲಿ ಹುಟ್ಟಿ ಹರಿಯುವ ದಕ್ಷಿಣ ಪಿನಾಕಿನಿ ನದಿಪಾತ್ರದಲ್ಲಿರುವ ಕೆರೆಗಳಲ್ಲಿ ಯಲಹಂಕ ಕೆರೆ ಅತಿ ದೊಡ್ಡದು. 363 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆ 5 ಕಿ.ಮೀ. ಸುತ್ತಳತೆ ಹೊಂದಿದೆ.

ಯಲಹಂಕ ಶಾಸಕ ಹಾಗೂ BDA ಅಧ್ಯಕ್ಷರೂ ಆದ ಎಸ್.ಆರ್.ವಿಶ್ವನಾಥ್ ಯಲಹಂಕ ಕೆರೆ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಕೆರೆ ಸುತ್ತ ವಾಕಿಂಗ್ ಟ್ರ್ಯಾಕ್, ಮಕ್ಕಳ ಆಟದ ಸಲಕರಣೆ ವ್ಯವಸ್ಥೆ, ಯುವಕರಿಗಾಗಿ ಓಪನ್ ಜಿಮ್, ಗಂಗಮ್ಮಗುಡಿ ಅಭಿವೃದ್ಧಿ, ಕೆರೆ ಸೌಂದರ್ಯಕ್ಕಾಗಿ ಸಾವಿರಾರು ಗಿಡ ನೆಡಲಾಗಿದೆ. ಕಳೆದ ನವೆಂಬರ್ ಮಳೆಗೆ 2 ತಿಂಗಳ ಕಾಲ ಕೆರೆ ಕೋಡಿ ಹರಿದಿತ್ತು. ಪ್ರತಿದಿನ ನೂರಾರು ಜನರು ವಾಯುವಿಹಾರ ನಡೆಸುತ್ತಾರೆ. ಹೀಗೆ ಆಕರ್ಷಣೀಯ ಪ್ರವಾಸಿತಾಣವಾಗಿ ಯಲಹಂಕ ಕೆರೆ ಅಭಿವೃದ್ಧಿ ಆಗ್ತಿದೆ.

ಕೆರೆಯಂಗಳದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಬಯಲು ರಂಗಮಂದಿರ ಸಿದ್ಧಗೊಳ್ಳುತ್ತಿದೆ. ಕಬ್ಬಿಣದ ವೇಸ್ಟ್ ನಿಂದಲೇ ತಯಾರಿಸಿರುವ ಅಲಂಕಾರಿಕ ವಸ್ತುಗಳನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದೇ ಮೇ 14ರಂದು ಬಯಲು ರಂಗಮಂದಿರ ಉದ್ಘಾಟನೆಗೊಳ್ಳಲಿದೆ. ಇಂದು ಮುಂಜಾನೆ ಶಾಸಕ ಎಸ್.ಆರ್.ವಿಶ್ವನಾಥ್, ಅಲಂಕಾರಿಕ ವಸ್ತುಗಳ ಕಾಮಗಾರಿ ವೀಕ್ಷಿಸಿದರು.

ಸುಸಜ್ಜಿತ ಬೋಟಿಂಗ್ ಸೌಲಭ್ಯವೂ ಜನರನ್ನು ಆಕರ್ಷಿಸಲಿದೆ. ಕಾರಂಜಿ, ಲೋಹದ ಹಂಸಪಕ್ಷಿ, ಕಲ್ಯಾಣಿ, ಬಯಲು ರಂಗಮಂದಿರ ಇತ್ಯಾದಿ ಕೋಟ್ಯಂತರ ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಜ್ಜುಗೊಂಡಿದೆ.

- SureshBabu Public Next ಯಲಹಂಕ

Edited By : Nagesh Gaonkar
PublicNext

PublicNext

08/05/2022 03:13 pm

Cinque Terre

34.99 K

Cinque Terre

0

ಸಂಬಂಧಿತ ಸುದ್ದಿ