ಬೆಂಗಳೂರು: ಒಂದು ಹಂತದಲ್ಲಿ ಇಡೀ ರಾಜ್ಯ ಪ್ರವಾಸ ಮುಗಿಸಿ ಬಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಇದೀಗ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸುತ್ತಿದ್ದಾರೆ.
ಬಜೆಟ್ ಅನುಷ್ಠಾನ ವನ್ನು ಚುರುಕುಗೊಳಿಸುವ ಸಂಬಂಧ ವೈದ್ಯಕೀಯ, ಜಲಸಂಪನ್ಮೂಲ,ಲೋಕೋಪಯೋಗಿ,ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ ಯ ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸಿ ಅನುಷ್ಠಾನದ ಇಡೀ ವರ್ಷದ ಕ್ಯಾಲೆಂಡರ್ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ.
PublicNext
04/05/2022 12:56 pm