ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ ವಿಮಾನ‌ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಬೇಕು; ಬಿಡಿಎ ಅಧ್ಯಕ್ಷ.

ಯಲಹಂಕ: ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಮಹನೀಯರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡಬೇಕೆಂಬ ಕೂಗು ಬಲವಾಗಿ ಕೇಳಿಬರ್ತಿದೆ. ಶಿವಮೊಗ್ಗ ಎಂದ ಕೂಡಲೇ ಕನ್ನಡ ನಾಡು ನುಡಿಗಾಗಿ ದುಡಿದ ಶಾಂತವೇರಿ ಗೋಪಾಲಗೌಡರು, ಹಾಗೆಯೇ ಕನ್ನಡ ಏಕೀಕರಣಕ್ಕೆ ದುಡಿದ ಕಡಿದಾಳ್ ಮಂಜಪ್ಪ ಹೆಸರುಗಳ ಜೊತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರ ಹೆಸರು ತಳುಕು ಹಾಕಿಕೊಂಡಿದೆ.

ಆದರೆ ಸ್ವತಃ ಯಡಿಯೂರಪ್ಪನವರೇ ನನ್ನ ಹೆಸರು ಬೇಡ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ತಿಳಿಸಿದ್ದಾರೆ. ಆದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ನಾಯಿ ಸಹ ಯಡಿಯೂರಪ್ಪ ರವರ ಹೆಸರಿಡಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಇದೀಗ ಯಲಹಂಕ ಶಾಸಕ, ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಸಹ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ರವರ ಹೆಸರಿಡುವುದು ಸೂಕ್ತ ಎಂದಿದ್ದಾರೆ.

Edited By : Manjunath H D
PublicNext

PublicNext

25/04/2022 11:51 am

Cinque Terre

34.22 K

Cinque Terre

1

ಸಂಬಂಧಿತ ಸುದ್ದಿ