ದೇವನಹಳ್ಳಿ: ಭಯೋತ್ಪಾದನೆ ಮಾಡುವವರಿಗೆ ಮೊದಲು ಬಿರಿಯಾನಿ ಕೊಡ್ತಿದ್ದರು. ಈಗ ನಾವು ಬಿರಿಯಾನಿ ತಿನ್ನಿಸಲ್ಲ. ಬಂದೂಕಿನಿಂದ ದಾಳಿ ಮಾಡುವವರಿಗೆ ಸೈನಿಕರ ಬಂದೂಕಿನಿಂದಲೇ ಉತ್ತರ ಕೊಡ್ತೀವಿ. ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಡ್ತೇವೆ. ಬಾಲಬಿಚ್ಚಿದ್ರೆ JCB ಬರುತ್ತೆ, ಬುಲ್ಡೋಜರ್ ಬರುತ್ತೆ ಎಂದು ದೇಶದ್ರೋಹಿಗಳ ಬಗ್ಗೆ ಸಿ.ಟಿ.ರವಿ ಕಿಡಿಕಾರಿದರು.
ನೆನ್ನೆಯಷ್ಟೆ ದೇವನಹಳ್ಳಿ ಸಮೀಪ ಬಿಜೆಪಿ ಪಕ್ಷದಿಂದ ವಿಭಾಗೀಯ ಮಟ್ಟದ ಕಾರ್ಯಕಾರಿಣಿ ನಡೆದಿತ್ತು. ನೆನ್ನೆಯ ಕಾರ್ಯಕಾರಿಣಿಯ ಪ್ರತಿಬಿಂಬದಂತೆ ಇಂದು ದೇವನಹಳ್ಳಿಯ ವಿಜಯಪುರದಲ್ಲಿ ಬಿಜೆಪಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಸಿ.ಟಿ.ರವಿ ಮಾತನಾಡಿದರು.
ದೇಶದ್ರೋಹಿಗಳು ಹಾಗೂ ಅಂತವರಿಗೆ ಬೆಂಬಲ ಕೊಡುವ ಕಿಡಿಗೇಡಿಗಳ ವಿರುದ್ಧ ಹರಿಹಾಯ್ದರು.
PublicNext
22/04/2022 07:01 pm