ಬೆಂಗಳೂರು: ದಿಂಗಾಲೇಶ್ವರ ಎಂತಾ ಮನುಷ್ಯ ಅಂತ ನನಗೆ ಗೊತ್ತಿದೆ. ಈತನ ಪೂರ್ವ ಇತಿಹಾಸ ಎಲ್ಲವೂ ನನಗೆ ತಿಳಿದಿದೆ
ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಕಿಡಿಕಾರಿದ್ದಾರೆ.
ಆ ಮೂಲಕ ಮಠಗಳಿಗೆ ಅನುದಾನ ಕೊಡುವುದಕ್ಕೂ ಕಮಿಷನ್ ಕೊಡಬೇಕು ಎಂದು ಹೇಳಿಕೆ ನೀಡಿದ್ದ ದಿಂಗಾಲೇಶ್ವರ ಸ್ವಾಮಿಗಳ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಸ್ವಾಮಿಗಳು ಮಠದ ಗೌರವ ಕಾಪಾಡುವ ಕೆಲಸ ಮಾಡಬೇಕು. ಈ ಹಿಂದೆ 3 ಸಾವಿರ ಮಠದ ಉತ್ತರಾಧಿಕಾರಿಯಾಗಲು ಇದೇ ದಿಂಗಾಲೇಶ್ವರರು ತೋಳ್ಬಲ ಪ್ರಯೋಗ ಮಾಡಿದ್ದರು. ಈ ಮನುಷ್ಯನ ಪೂರ್ವಾಪರ ಇತಿಹಾಸ ಎಲ್ಲಾ ತಿಳಿದಿದೆ. ತೋಂಟದಾರ್ಯ ಶ್ರೀಗಳ ಜನ್ಮದಿನವನ್ನು ಭಾವೈಕ್ಯತೆಯ ದಿನವನ್ನಾಗಿ ಘೋಷಣೆ ಮಾಡಿದ್ದಕ್ಕೆ ದಿಂಗಾಲೇಶ್ವರರು ವಿರೋಧ ವ್ಯಕ್ತಪಡಿಸಿದ್ರು.
30% ಕಮಿಷನ್ ಅಂತಾರೆ ಯಾರಿಗೆ ಕಮೀಷನ್ ಕೊಟ್ಟಿದ್ದಾರೆ ಅಂತ ಬಹಿರಂಗ ಪಡಿಸಲಿ. ಒಂದು ಮಠಕ್ಕೆ ನೀಡಿದ ಗೌರವವನ್ನು ಸಹಿಸದ ಇವರು ಬಸವಣ್ಣನ ವಚನ ಹೇಳ್ತಾರೆ. 3 ಸಾವಿರ ಮಠದ ಗದ್ದುಗೆ ತಪ್ಪಿದಕ್ಕೆ ಈ ರೀತಿ ಹೇಳಿಕೆ ಕೊಟ್ಟಿರಬೇಕು. ಇವರದ್ದೆಲ್ಲಾ ನನಗೆ ಗೊತ್ತಿದೆ ಎಂದು ಪಾಟೀಲ್ ಕಿಡಿಕಾರಿದ್ರು.
PublicNext
19/04/2022 04:53 pm