ಆನೇಕಲ್: ನೆರಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಬಿಜೆಪಿ ಅಶೋಕ್ ರೆಡ್ಡಿ 30 ಲಕ್ಷ ರೂ. ಪಡೆದಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್‌ಆರ್ ರಮೇಶ್ ಆಡಿಯೋ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಈ ಬಗ್ಗೆ ಎಸ್ಆರ್‌ಟಿ ಅಶೋಕ್ ರೆಡ್ಡಿ ಇದು ಸತ್ಯಕ್ಕೆ ದೂರದ ಮಾತು, ಎನ್ ಆರ್ ರಮೇಶ್‌ಗೆ ಯಾರೋ ಸುಳ್ಳು ಮಾಹಿತಿಯನ್ನು ಕೊಟ್ಟಿದ್ದಾರೆ. ವಿಕೃತ ಮನಸ್ಸಿನ ಯುವಕರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ತನಿಖೆ ನಂತರ ಸತ್ಯಾಸತ್ಯತೆ ತಿಳಿದು ಬರಲಿದೆ. ಈ ಬಗ್ಗೆ ನಾವು ಹೆಚ್ಚು ಮಾತಾಡೋದಿಲ್ಲ ಎಂದು ತಿಳಿಸಿದ್ದಾರೆ.
ಆನೇಕಲ್‌ನ ಚಂದಾಪುರ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸುಳ್ಳು ನಿಜನೋ ಗೊತ್ತಿಲ್ಲ. ಒಂದು ವಿಚಾರದ ಬಗ್ಗೆ ಗೊತ್ತಿಲ್ಲದೆ ಮಾತನಾಡಿದ್ದು ಸರಿಯಲ್ಲ ಎಂದು ಎಸ್‌ಆರ್‌ಟಿ ಅಶೋಕ್ ರೆಡ್ಡಿ ಹೇಳಿದರು.
ಕಳೆದ ಮೂರು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಎನ್‌ಆರ್ ರಮೇಶ್ ಆಡಿಯೋ ಸಂಭಾಷಣೆ ಸಾಕಷ್ಟು ಸದ್ದು ಮಾಡುತ್ತಿದೆ. ಜೊತೆಗೆ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿರುವ ಹೊಗೆ ಕಾಣಿಸಿಕೊಂಡಿದೆ.
Kshetra Samachara
09/04/2022 06:37 pm