ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಂತಿ ನಗರ: “ಆರಗ ಜ್ಞಾನೇಂದ್ರರಿಗೆ ಅರ್ಧ ಜ್ಞಾನ ಇದೆ”: ಗೃಹ ಮಂತ್ರಿ ವಿರುದ್ಧ ನಲಪಾಡ್ ಕಿಡಿ

ಶಾಂತಿ ನಗರ: ಚಂದ್ರು ಕೊಲೆ ಪ್ರಕರಣದಲ್ಲಿ ಗೃಹಮಂತ್ರಿ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಂದು ಯೂತ್ ಕಾಂಗ್ರೆಸ್ ವತಿಯಿಂದ ಗೃಹಮಂತ್ರಿ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಕೇಂದ್ರ ವಿಭಾಗ ಡಿಸಿಪಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ದೂರು ನೀಡಿದ್ರು.

ಈ ವೇಳೆ ಮಾತನಾಡಿದ ನಲಪಾಡ್, ಫುಲ್ ಜ್ಞಾನ ಇರಬೇಕು , ಇಲ್ಲ ಜ್ಞಾನವೇ ಇರಬಾರದು. ಆದ್ರೆ ಆರಗ ಅವರಿಗೆ ಅರ್ಧ ಜ್ಞಾನ ಇದೆ ಎಂದು ಕಿಡಿಕಾರಿದ್ರು. ಆರಗ ಜ್ಞಾನೇಂದ್ರ ಚಿಕ್ಕ ಮಗುವಲ್ಲ. ಪದೇ ಪದೇ ಹೇಳಿಕೆ ಬದಲಿಸೋಕೆ. ಅವ್ರು ಮೂರನೇ ಬಾರಿಗೆ ಈ ತರಹದ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ.

ರಾಜ್ಯದ ಕೋಮು ಸಾಮುರಸ್ಯ ಹಾಳು ಮಾಡುವ ಕೆಲಸವನ್ನ ಮಾಡಿದ್ದಾರೆ. ಆರಗ ಜ್ಞಾನೇಂದ್ರ ಮೇಲೆ ಎಫ್ ಐ ಆರ್ ಮಾಡಬೇಕು. ಸಚಿವ ಸ್ಥಾನದಿಂದ ವಜಾ ಮಾಡಬೇಕು ಅಂತಾ ದೂರು ನೀಡಿದ್ದೇವೆ. ಗೃಹ ಸಚಿವರಿಗೆ ಎಲ್ಲಾ ಕಡೆಯಿಂದ ಮಾಹಿತಿ ಬಂದಿರುತ್ತೆ .‌ರಾಜ್ಯದ ಎಲ್ಲಾ ಠಾಣೆಗಳಲ್ಲೂ ದೂರು ದಾಖಲಿಸಲಿದ್ದೇವೆ ಎಂದು ಹೇಳಿದ್ರು.

Edited By :
PublicNext

PublicNext

07/04/2022 11:06 pm

Cinque Terre

41.93 K

Cinque Terre

5

ಸಂಬಂಧಿತ ಸುದ್ದಿ