ಆನೇಕಲ್ : ಆನೇಕಲ್ ಸುತ್ತಮುತ್ತ ಇರುವಂತಹ ಬ್ಯಾಂಕಿನಲ್ಲಿ ಕನ್ನಡ ಬರುವಂತಹ ಅಧಿಕಾರಿಗಳು ನೇಮಕ ಮಾಡಿಕೊಳ್ಳುವಂತೆ ಬ್ಯಾಂಕ್ ಮ್ಯಾನೇಜರ್ ಗಳಿಗೆ ಸೂಚನೆ ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಆನೇಕಲ್ ಅಧ್ಯಕ್ಷ ಅದೂರು ಪ್ರಕಾಶ್ ತಹಶೀಲ್ದಾರ್ ಗೆ ಮನವಿಯನ್ನ ಮಾಡಿದರು.
ಆನೇಕಲ್ ತಾಲ್ಲೂಕಿನ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಕೆಲವೊಂದು ಬೇಡಿಕೆಗಳನ್ನು ಗಮನಕ್ಕೆ ತಂದರು. ಪ್ರಮುಖವಾಗಿ ಈ ಭಾಗದ ಜನರು ಹಳ್ಳಿಗಾಡಿನವರಾಗಿದ್ದು ತಮ್ಮ ಖಾತೆಯಿಂದ ಹಣ ತೆಗೆದುಕೊಳ್ಳಲು ಹೋದಾಗ ಭಾಷೆ ಬಾರದೆ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಬ್ಯಾಂಕ್ ಮ್ಯಾನೇಜರ್ ಗಳನ್ನು ಕರಿಸಿ ಅವರಿಗೆ ಮಾಹಿತಿ ನೀಡಿ ಈ ಬಗ್ಗೆ ಈ ಮನದಟ್ಟು ಮಾಡಿಕೊಳ್ಳುವಂತೆ ತಹಶೀಲ್ದಾರ್ ಮುಖಾಂತರ ಮನವಿ ಮಾಡಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಸದಸ್ಯರು ಹಾಗೂ ಅಧ್ಯಕ್ಷರು ಉಪಸ್ಥಿತರಿದ್ದರು.
PublicNext
06/04/2022 08:07 am