ದೇವನಹಳ್ಳಿ: ಇನ್ನೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯ ಸ್ಪಷ್ಟ ಚಿತ್ರಣ ಸಿಗಲಿದೆ. ಯಾರನ್ನು ನೇಮಿಸಬೇಕು, ಯಾರನ್ನು ಕೈಬಿಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಸಚಿವದ್ವಯರು ತಿಳಿಸಿದ್ದಾರೆ.
ಪಶುಸಂಗೋಪನೆ ಇಲಾಖೆ ವತಿಯಿಂದ 5 ಆಸ್ಪತ್ರೆಗಳನ್ನು ದೇವನಹಳ್ಳಿಯ ಯಲಿಯೂರು ಪಂಚಾಯ್ತಿ ವ್ಯಾಪ್ತಿಲಿ ಲೋಕಾರ್ಪಣೆ ಮಾಡಲಾಯ್ತು. ಇದೇ ವೇಳೆ ಮಾತನಾಡಿದ ಸಚಿವರಾದ ಡಾ. ಸುಧಾಕರ್ ಮತ್ತು MTB ನಾಗರಾಜ್, ಇನ್ನೆರಡು ದಿನಗಳಲ್ಲಿ ಸಚಿವ ಸಂಪುಟದ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ.
ದೇವನಹಳ್ಳಿ ತಾಲ್ಲೂಕು ಚನ್ನರಾಯ ಹೋಬಳಿಯ ಹತ್ತಾರು ಹಳ್ಳಿಗಳಿಂದ ಸಾವಿರಾರು ಎಕರೆ ಕೃಷಿ ಭೂಮಿಯನ್ನು KIADB ಸ್ವಾಧೀನ ಪಡಿಸಿದೆ. ಇದೀಗ 2- 3 ಹಂತಗಳಲ್ಲಿ ಮತ್ತಷ್ಟು ಜಮೀನು ಸ್ವಾಧೀನ ವಿರೋಧಿಸಿ ನೂರಾರು ರೈತರು ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸುಧಾಕರ್ ಏ. 8ರಂದು KIADB ಮೀಟಿಂಗ್ ಕರೆದು ಚರ್ಚಿಸಿ, ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಪಂ ಮತ್ತು ಪಶುಸಂಗೋಪನೆ ಇಲಾಖೆ ವತಿಯಿಂದ 5 ಆಸ್ಪತ್ರೆಗಳು ಲೋಕಾರ್ಪಣೆ ಆಗಿವೆ. ಇದೇ ದಿನ ಬಾಬು ಜಗಜೀವನ ರಾಂ ಅವರ ಹುಟ್ಟುಹಬ್ಬ ಇದ್ದದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಗಟ್ಟಿತು.
- SureshBabu Public Next ದೇವನಹಳ್ಳಿ
PublicNext
05/04/2022 10:49 pm