ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾರ್ವಜನಿಕರ ಬಳಕೆಗೆ ಸಿಗದ 5 ಕೋಟಿ ವೆಚ್ಚದ ಡಾ.ಬಾಬು ಜಗಜೀವನ ರಾಂ ಭವನ

ದೊಡ್ಡಬಳ್ಳಾಪುರ : 4 ವರ್ಷಗಳ ಹಿಂದೆಯೇ ಡಾ. ಬಾಬು ಜಗಜೀವನ ರಾಂ ಭವನ ಕಟ್ಟಡ ಉದ್ಘಾಟನೆಯಾಗಿದೆ. ಆದರೆ ಇವತ್ತಿಗೂ ಸಾರ್ವಜನಿಕರ ಬಳಕೆಗೆ ಭವನ ಬಳಕೆಯಾಗುತ್ತಿಲ್ಲ. 5 ಕೋಟಿ ವೆಚ್ಚದ ಭವನ ಪಾಳು ಬೀಳುವ ಸ್ಥಿತಿಯಲ್ಲಿದೆ.

ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಂ ರವರ 115 ನೇ ಜನ್ಮದಿನ ಇಂದು. ಉಪ ಪ್ರಧಾನಿಯಾದ ಏಕೈಕ ದಲಿತ ವ್ಯಕ್ತಿ ಅವರು. ದಲಿತರ ಸಾಮಾಜಿಕ ಕಾರ್ಯಕ್ಕೆ ಅನುಕೂಲವಾಗಲೆಂದು ರಾಜ್ಯದ ಪ್ರತಿ ತಾಲೂಕಿನಲ್ಲಿ ಡಾ. ಬಾಬು ಜಗಜೀವನ ರಾಂ ಹೆಸರಿನಲ್ಲಿ ಸಮುದಾಯ ಭವನ ಕಟ್ಟಲಾಗಿದೆ. ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ 5 ಕೋಟಿ ವೆಚ್ಚದಲ್ಲಿ ಸುಂದರವಾದ ಡಾ. ಬಾಬು ಜಗಜೀವನ ರಾಮ್ ಭವನ ಕಟ್ಟಲಾಗಿದೆ. ಭವನ ಉದ್ಘಾಟನೆಯಾಗಿ 4 ವರ್ಷಗಳೇ ಕಳೆದರು ಸಾರ್ವಜನಿಕ ಬಳಕೆಗೆ ಬಾರದೆ ಹಾಳು ಕೊಂಪೆಯಾಗುತ್ತಿದೆ.

ಡಾ.ಬಾಬು ಜಗಜೀವನ ರಾಮ್ ಭವನದಲ್ಲಿ ಅವ್ಯವಸ್ಥೆಗಳ ದೊಡ್ಡ ಪಟ್ಟಿಯೇ ಇದೆ. ಬೋರ್ ವೇಲ್ ಕೆಟ್ಟು ಹೋಗಿದ್ದು ನೀರಿನ ಸಮಸ್ಯೆ ಇದೆ. ಕಟ್ಟಡ ಸುತ್ತ ಗಿಡಗಂಟಿಗಳು ಬೆಳೆದು ಕಾಲಿಡುವುದಕ್ಕೂ ಆಗುತ್ತಿಲ್ಲ. ಕಟ್ಟಡ ಮೇಲ್ಛಾವಣಿ ಕಾಮಾಗಾರಿ ಪೂರ್ಣವಾಗಿಲ್ಲ. ಮದುವೆ ಸಮಾರಂಭ ಮಾಡಲು ಬೇಕಾದ ಆಡುಗೆ ಪಾತ್ರೆಗಳು ಮತ್ತು ಟೇಬಲ್ ಕುರ್ಚಿಗಳೇ ಇಲ್ಲ. ಭವನಕ್ಕೆ ಸಂಪರ್ಕಿಸುವ ರಸ್ತೆ ಕಿತ್ತು ಹೋಗಿದೆ. ಭವನದ ಅವರಣ ಜಾಗವನ್ನ ಕಾಂಕ್ರೀಟ್ ಹಾಕಬೇಕಿದೆ. ಇಷ್ಟೆಲ್ಲ ಸಮಸ್ಯೆಗಳ ಕಾರಣದಿಂದ ಕಟ್ಟಡವನ್ನ ಸಾರ್ವಜನಿಕರು ಬಳಸುತ್ತಿಲ್ಲ.

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಡಾ. ಬಾಬು ಜಗಜೀವನ ರಾಮ್ ಭವನ ಇದೆ. ಸಾರ್ವಜನಿಕರ ಬಳಕೆಗೆ ಬಾರದ ಕಟ್ಟಡದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಶೀಘ್ರದಲ್ಲೇ ಭವನ ಸಾರ್ವಜನಿಕರ ಬಳಕೆಗೆ ಬರಲಿದೆ. ಪರಿಶಿಷ್ಟ ಸಮುದಾಯದವರ ಮದುವೆ ಸಮಾರಂಭ ಕಾರ್ಯಕ್ರಮಗಳಿಗೆ ಭವನವನ್ನ ಬಾಡಿಗೆ ನೀಡಲಾಗುವುದು. ಪರಿಶಿಷ್ಟ ಸಮುದಾಯಕ್ಕೆ 20 ಸಾವಿರ ಮತ್ತು ಇತರೆ ಸಮುದಾಯದವರಿಗೆ 25 ಸಾವಿರ ನಿಗದಿ ಮಾಡಲಾಗಿದೆ ಎಂದರು.

ಇಂದು ಡಾ.ಬಾಬು ಜಗಜೀವನ ರಾಮ್ ಅವರ ಜನ್ಮದಿನ. ಅವರ ಆಚರಣೆ ನೆಪದಲ್ಲಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಣ್ತೆರೆದು ಭವನ ಸಾರ್ವಜನಿಕರ ಬಳಕೆಗೆ ಬರುವುದೋ ಕಾದು ನೋಡಬೇಕಿದೆ.

Edited By : Nagesh Gaonkar
PublicNext

PublicNext

05/04/2022 06:21 pm

Cinque Terre

34.84 K

Cinque Terre

0

ಸಂಬಂಧಿತ ಸುದ್ದಿ