ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಡಾ ಬಾಬು ಜಗಜೀವನರಾಮ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ವೇದಿಕೆಯಲ್ಲಿರುವಾಗಲೇ ಸಭಿಕರಿಂದ ಗಲಾಟೆ ಧಕ್ಕಾರ ಕೂಗುವಿಕೆ ನಡೆದಿದೆ.
ಸಮಾಜಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ರು. ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಸಿಸಿಪಾಟೀಲ್, ಮಾದಾರ ಚನ್ನಯ್ಯಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದ ಸಮಾರಂಭದಲ್ಲಿ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಸಭಿಕರ ನಡುವೆ ಇದ್ದ ಸಿದ್ದರಾಜು ಎಂಬುವರು ಜೋರಾಗಿ ಕೂಗಲು ಆರಂಭಿಸಿದರು. ಡಾ ಬಾಬು ಜಗಜೀವನರಾಮ್ ಅವರ 115 ನೇ ಜನ್ಮದಿನಾಚರಣೆಗೆ ಸರ್ಕಾರ ಸರಿಯಾದ ಪ್ರಚಾರವನ್ನು ನೀಡಿಲ್ಲ. ಪತ್ರಿಕೆಗಳಿಗೆ ಕಾಲು ಭಾಗದಷ್ಟೂ ಜಾಹಿರಾತು ನೀಡಿಲ್ಲ ಅದೇ ಕಾರಣಕ್ಕೆ ಜನರು ಕಡಿಮೆ ಆಗಿದ್ದಾರೆ. ಈ ಸರ್ಕಾರ ನಮ್ಮ ಸಮಾಜದ ವಿರೋಧಿ ಎಂದು ಘೋಷಣೆ ಕೂಗಲು ಅರಂಭಿಸಿದರು.
ಸಚಿವ ಗೋವಿಂದ ಕಾರಜೋಳ ವಿರುದ್ಧವೂ ಅಸಮಧಾನ ವ್ಯಕ್ತಪಡಿಸಿದ್ರು. ಕೊನೆಗೆ ಅಲ್ಲಿನ ಅಧಿಕಾರಿಗಳು ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರಾದರೂ ಕಾರ್ಯಕ್ರಮದ ಕೊನೆಯ ತನಕ ಸಣ್ಣಗೆ ಗಲಾಟೆ ನಡೆಯುತ್ತಲೇ ಇತ್ತು. ಸಿಎಂ ಅವರು ಭಾಷಣ ಮಾಡುವಾಗಲೂ ಕೆಲವರು ಜೋರುಜೋರಾಗಿ ಮಾತಾಡುತ್ತಲೇ ಇದ್ದರು.
PublicNext
05/04/2022 03:51 pm