ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿಗೆ ಬಂದು ತೆರೆದ ವಾಹನ ಏರಿ ಕೈಬೀಸಿ ತೆರಳಿ ನಿರಾಶೆ ಮೂಡಿಸಿದ ರಾಹುಲ್ ಗಾಂಧಿ

ದೇವನಹಳ್ಳಿ:ತುಮಕೂರು ಕಾರ್ಯಕ್ರಮಕ್ಕೆ ತೆರಳಲು ಇಂದು ಮಧ್ಯಾಹ್ನ ದೇವನಹಳ್ಳಿ ಏರ್ಪೋರ್ಟ್ ಗೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಆಗಮಿಸಿದ್ದರು. ಕಾಂಗ್ರೆಸ್ ಪಕ್ಷದ ಈ ಯುವರಾಜನ ಆಗಮನ ಹಿನ್ನೆಲೆ ದೇವನಹಳ್ಳಿ ಬೈಪಾಸ್ ದೊಡ್ಡಬಳ್ಳಾಪುರ ಸರ್ಕಲ್‌ ನಲ್ಲಿ ಸಾವಿರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರು. ಬೆಳಗ್ಗೆ 10 ಗಂಟೆಯಿಂದ ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ ತುಂಬೆಲ್ಲಾ ಕಾಂಗ್ರೆಸ್ ಯುವರಾಜನ ಆಗಮನಕ್ಕೆ ಸ್ವಾಗತ ಕೋರುವ ಪ್ಲೆಕ್ಸ್‌ಗಳೇ ರಾರಾಜಿಸುತ್ತಿದ್ದವು.

ರಾಹುಲ್ ಗಾಂಧಿ ದೇವನಹಳ್ಳಿಗೆ ಬಂದವ್ರೆ, ಪಕ್ಷದ ಕಾರ್ಯಕರ್ತರನ್ನ ಉದ್ದೇಶಿಸಿ ಖಡಕ್ ಭಾಷಣ ಮಾಡ್ತಾರೆ ಎಂದು ನಿರೀಕ್ಷಿಸಲಾಗಿತ್ತು. ದೇವನಹಳ್ಳಿ ಮಾಜಿ ಶಾಸಕ ವೆಂಕಟಸ್ವಾಮಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭರ್ಜರಿ ಪ್ಲೆಕ್ಸ್‌ಗಳನ್ನ ಹಾಕಿಸಿ ಯುವರಾಜ ರಾಹುಲ್ ವಿಜೃಂಭಿಸುವಂತೆ ಬಿಂಬಿಸಲಾಗಿತ್ತು. ಆದರೆ, 4 ಗಂಟೆಗೆ ದೇವನಹಳ್ಳಿ ಬೈಪಾಸ್‌ಗೆ ಬಂದ ಯುವರಾಜ ಭಾರಿ ಭದ್ರತೆಯಲ್ಲಿ ತೆರೆದ ವಾಹನ ಏರಿ ಜನರತ್ತ ಕೈಬೀಸಿದರು. ಕಾಂಗ್ರೆಸ್ ಮುಖಂಡರು ಮಲ್ಲಿಗೆ ಹಾರ ಹಾಕಿ ಸ್ವಾಗತ ಕೋರಿದರು. ಇನ್ನೇನು ರಾಹುಲ್ ಗಾಂಧಿ ದೇವನಹಳ್ಳಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿ ಭರ್ಜರಿ ಭಾಷಣ ಮಾಡ್ತಾರೆ. ಅದು ಮುಂದಿನ ಚುನಾವಣೆಗೆ ಸಹಕಾರಿ ಆಗ್ತದೆ ಎಂದು ನಿರೀಕ್ಷಿಸಿದ್ದ ಜನರಿಗೆ ರಾಹುಲ್ ಗಾಂಧಿ ನಿರಾಶೆ ಮೂಡಿಸಿದರು. ಬಂದ ಹಾಗೆ ಬಂದು ಜನರತ್ತ ಕೈಬೀಸಿ ದೊಡ್ಡಬಳ್ಳಾಪುರ ಕಡೆಗೆ, ತುಮಕೂರಿನತ್ತ‌ ನಡೆದೇ ಬಿಟ್ಟರು.

ರಾಜ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲಿ ದೇವನಹಳ್ಳಿ ಕಾಂಗ್ರೆಸ್ ಪಕ್ಷವೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ನಮ್ಮ‌ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಶಾಸಕ ವೆಂಕಟಸ್ವಾಮಿ ತಿಳಿಸಿದರು. ಕಾರ್ಯಕರ್ತರು ಸಹ ರಾಹುಲ್ ಗಾಂಧಿ ಆಗಮನ‌ ಖುಷಿಕೊಟ್ಟಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ತುಂಬಾ ಪ್ಲೆಕ್ಸ್‌ಗಳಲ್ಲಿ ರಾರಾಜಿಸಿದ್ದ ಯುವರಾಜ ಮಾತನಾಡದೆ ತೆರಳಿದ್ದು ಸಾವಿರಾರು ಜನ ಕಾರ್ಯಕರ್ತರ ಅಸಮಾದಾನಕ್ಕೆ‌ ಕಾರಣವಾಗಿದ್ದು ಸುಳ್ಳಲ್ಲ.

SureshBabu Public Next ದೇವನಹಳ್ಳಿ..

Edited By :
PublicNext

PublicNext

31/03/2022 06:40 pm

Cinque Terre

32 K

Cinque Terre

14

ಸಂಬಂಧಿತ ಸುದ್ದಿ