ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಹುಮತ ಸಾಬೀತು ಪಡಿಸುವಂತೆ ಬಿಜೆಪಿ ಕೌನ್ಸಿಲರ್‌ಗಳು: ಅನಿರ್ದಿಷ್ಟಾವಧಿ ಸತ್ಯಾಗ್ರಹ..!!

ಆನೇಕಲ್ ಪುರಸಭೆ ಅಧ್ಯಕ್ಷರು ಬಹುಮತ ಸಾಬೀತುಪಡಿಸುವಂತೆ ಒತ್ತಾಯಿಸಿ ಬಿಜೆಪಿಯ ಕೌನ್ಸಲರ್ ಗಳು ಪುರಸಭೆ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ..

ಮಹಾತ್ಮ ಗಾಂಧೀಜಿ ಫೋಟೋಗೆ ಹೂವಿನ ನಮನ ಸಲ್ಲಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಚಾಲನೆಯನ್ನು ನೀಡಿದರು

ಇನ್ನು ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ನಾಗರಾಜು ಪುರಸಭೆ ಅಧ್ಯಕ್ಷರು ಬಹುಮತ ಸಾಬೀತುಪಡಿಸುವ ವರೆಗೆ ಯಾವುದೇ ಕಾರಣಕ್ಕೂ ಸಂಬಂಧಪಟ್ಟಂತೆ ಯಾವುದೇ ಸಭೆಗಳನ್ನು ಮಾಡುವಂತಿಲ್ಲ ಜೊತೆಗೆ ಅಕ್ರಮವಾಗಿ ಬಡಾವಣೆಗಳ ಖಾತೆಗಳನ್ನು ವಜಾ ಮಾಡಬೇಕೆಂದು ಬಿಜೆಪಿ ಕೌನ್ಸಿಲರ್ ಗಳು ಪಟ್ಟುಹಿಡಿದಿದ್ದಾರೆ..

ಇನ್ನು ಈ ಬಗ್ಗೆ ಪ್ರತಿಕ್ರಿಯೆ ಮಾಡಿದ ಪುರಸಭೆ ಅಧ್ಯಕ್ಷ ಪದ್ಮನಾಭ ಅಕ್ರಮವಾಗಿ ಕಟ್ಟಡ ನಿರ್ಮಾಣ ಅಗುತಿದೆ..!!ಅತೀ ಜರೂರಾಗಿ ಕೆಲಸ ನಿಲ್ಲಿಸಬೇಕು ಅಂತ ಹೇಳ್ತರೆ, !? ಅಧಿಕಾರಿಗಳಿಗೆ ಅಡ್ಡ ಪಡಿಸುತ್ತಿರುವುದು ಕೂಡ ಇವರೇ ..!? ಅಧ್ಯಕ್ಷರಿಗೆ ನಮ್ಮ ಕೌನ್ಸಲರ್ ಗಳು ಯಾರಾದರೂ ನಮಗೆ ಒಮ್ಮತ ಇಲ್ಲ ಸಹಿ ಹಾಕಿಕೊಟ್ಟಿದ್ದಾರೆ. ಅದೂ ಇಲ್ಲ. ಅವರಿಗೆ ಅಭಿವೃದ್ಧಿ ಕೆಲಸ ಬೇಕಾಗಿಲ್ಲ. ಬರೀ ರಾಜಕೀಯ ಬೇಕು ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.

ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By : Manjunath H D
Kshetra Samachara

Kshetra Samachara

29/03/2022 08:01 pm

Cinque Terre

1.77 K

Cinque Terre

0

ಸಂಬಂಧಿತ ಸುದ್ದಿ