ಕೆ ಆರ್ ಪುರ: ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಲೆ ಶ್ರೀನಿವಾಸ್ ನೇತೃತ್ವದಲ್ಲಿ ಕೆಆರ್ ಪುರದ ಬಿಬಿಎಂಪಿ ಕಚೇರಿಯ ಎದುರು ಮೌನ ಪ್ರತಿಭಟನೆ ನಡೆಸಲಾಯಿತು....ದೇವಸಂದ್ರ ವಾರ್ಡ್ ಗೆ ಹೊಂದಿಕೊಂಡಿರುವ ಕೃಷ್ಣರಾಜಪುರ ಸಂತೆಯ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಹಾಗೂ ಆಟೋ ಡೈವರ್ಸ್ ಗಳಿಂದ ಮಹಿಳೆಯರಿಗೆ ಆಗುವಂತಾ ಕಿರಿಕಿರಿಗಳನ್ನು ತಡೆಯುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು... ಕೆಆರ್ ಪುರ ಸಂತೆಯಲ್ಲಿ ಪುಂಡರು ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸೇವನೆ ಮತ್ತು ಆಕ್ರಮ ಹಣ ವಸೂಲಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದರು.. ಇದಕ್ಕೆ ಸ್ಪಂದಿಸಿದ ಮಹದೇವಪುರ ವಲಯ ಬಿಬಿಎಂಪಿ ಆಯುಕ್ತರು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು..
Kshetra Samachara
28/03/2022 01:44 pm