ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅಂತೂ ಇಂತೂ ದೊಡ್ಡಬಳ್ಳಾಪುರ ನಗರಸಭೆಗೆ ಉದ್ಘಾಟನೆ ಭಾಗ್ಯ ಸಿಕ್ತು

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ನಗರಸಭೆಯ ನೂತನ ಕಾರ್ಯಾಲಯ ಕಟ್ಟಡ ಪೂರ್ಣಗೊಂಡು ವರ್ಷವೇ ಕಳೆದ್ರು ಉದ್ಘಾಟನೆಯ ಭಾಗ್ಯ ಇರಲಿಲ್ಲ, ಸತತ ಮೂರು ಭಾರಿ ಉದ್ಘಾಟನಾ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲಾಗಿತ್ತು, ಇಂದು ಸಚಿವ ಎಂಟಿಬಿ ನಾಗರಾಜ್ ರವರಿಂದ ಉದ್ಘಾಟನೆಯಾಗಲಿದೆ.

ನಗರಸಭೆಯ ನೂತನ ಕಟ್ಟಡವನ್ನ 6.70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ, ನಗರಸಭೆ ನೂತನ ಕಾರ್ಯಾಲಯ ಕಟ್ಟಡದಲ್ಲಿ ಸಭಾಂಗಣ, ಅಧ್ಯಕ್ಷರು, ಉಪಾಧ್ಯಕ್ಷರು, ಪೌರಾಯುಕ್ತರ ಕಚೇರಿ ಸೇರಿದಂತೆ ನಗರಸಭೆಯ ಎಲ್ಲಾ ವಿಭಾಗಗಳಿಗು ಪ್ರತ್ಯೇಕ ಕೊಠಡಿಗಳು ಹಾಗೂ ಆನ್ ಲೈನ್ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಒಂದೇ ಸೂರಿನಡಿ ನಗರಸಭೆ ಎಲ್ಲಾ ವಿಭಾಗದ ಸೌಲಭ್ಯಗಳು ದೊರೆಯುವಂತೆ ಮಾಡಲಾಗಿದೆ.

ಉದ್ಘಾಟನ ಸಮಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಲೋಕಸಭಾ ಸದಸ್ಯ ಬಿ.ಎನ್.ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಅ.ದೇವೇಗೌಡ, ಎಸ್.ರವಿ ಸೇರಿದಂತೆ ಹಲವು ಮುಖಂಡರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.

2017 ರಲ್ಲಿ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮ ಮಾಡಲಾಗಿದ್ದು ಕಳೆದ ವರ್ಷವೇ ಕಟ್ಟಡ ಕಾಮಾಗಾರಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಸಿದ್ದವಾಗಿತ್ತು, ಕಟ್ಟಡ ಉದ್ಘಾಟನೆಗೂ ದಿನಾಂಕ ನಿಗದಿ ಮಾಡಲಾಗಿತ್ತು ಆದರೆ ಕೋವಿಡ್ ಕಾರಣದಿಂದ ಒಮ್ಮೆ, ಚುನಾವಣೆ ನೀತಿ ಸಂಹಿತೆಯಿಂದ ಒಮ್ಮೆ ಮತ್ತು ಉಸ್ತುವಾರಿ ಸಚಿವರ ಬದಲಾವಣೆಯಿಂದ ಒಮ್ಮೆ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಗಿತ್ತು, ಇಂದು ಯಾವುದೇ ವಿಘ್ನ ಇಲ್ಲದೆ ನೂತನ ನಗರಸಭೆ ಕಾರ್ಯಾಲಯ ಉದ್ಘಾಟನೆಯಾಗಲಿದೆ.

Edited By : Shivu K
Kshetra Samachara

Kshetra Samachara

16/03/2022 10:26 am

Cinque Terre

2.11 K

Cinque Terre

0

ಸಂಬಂಧಿತ ಸುದ್ದಿ