ಆನೇಕಲ್ : ಅಭಿವೃದ್ಧಿಯ ದೃಷ್ಟಿಯಿಂದ ನಾವು ಬಿಜೆಪಿಗೆ ಬೆಂಬಲ ಸೂಚಿಸಿದ್ದೇವೆ ಎಂದು ಲೋಕಸಭಾ ಸದಸ್ಯ ಡಿಕೆ ಸುರೇಶ್ ತಿಳಿಸಿದರು.
ಬೊಮ್ಮಸಂದ್ರ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಡಿಕೆ ಸುರೇಶ್ ಭಾಗಿಯಾಗಿ ಮಾತನಾಡಿ ಬೊಮ್ಮಸಂದ್ರ ಪುರಸಭೆ ಚುನಾವಣೆ ಯಲ್ಲಿ ನಾವು ಅಧ್ಯಕ್ಷ ವೈ ಗೋಪಾಲ್, ಉಪಾಧ್ಯಕ್ಷರಾಗಿ ವಸಂತ್ ಕುಮಾರ್ ಅವರಿಗೆ ನಾವು ಬೆಂಬಲ ಸೂಚಿಸಿದ್ದೇವೆ.
ಇಲ್ಲಿನ ನಾಗರೀಕರ ಹಿತದೃಷ್ಟಿಯಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ಗೆ ಬೆಂಬಲ ಸೂಚಿಸಿದ್ದೇವೆ ಈ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸ ಆಗುವ ಹಿತದೃಷ್ಟಿಯಿಂದ ಹೀಗೆ ಮಾಡಿದ್ದೇವೆ. ಅದನ್ನು ಮಾಧ್ಯಮಗಳು ಯಾವ ತರನಾದರೂ ತೆಗೆದುಕೊಳ್ಳಲಿ ಸದ್ಯ ಈಗ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಬೆಂಬಲ ಮಾಡಿದ್ದೇವೆ ಜೊತೆಗೆ ಉತ್ತಮ ಆಡಳಿತ ನಡೆಸುತ್ತಾರೆ ಎಂಬುದು ಭರವಸೆ ಇದೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಆಗಲಿದೆ ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಭಾಗಿಯಾಗಿದ್ದರು.
PublicNext
14/03/2022 05:19 pm