ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡನಿಗೆ ಅಪಘಾತ:ಕೇಂದ್ರ ಸಚಿವ ಭೇಟಿ

ಆನೇಕಲ್: ಅಪಘಾತಕ್ಕೀಡಾದ ಬಿಜೆಪಿಯ ಹಿರಿಯ ಮುಖಂಡ ತಿಮ್ಮಾರೆಡ್ಡಿ ಅವರ ಮನೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಆರೋಗ್ಯ ವಿಚಾರಿಸಿದರು.

ಇಲ್ಲಿನ ಆನೇಕಲ್ ಮುತ್ತಾ ಗಟ್ಟಿಗ್ರಾಮದ ನಿವಾಸಿ ತಿಮ್ಮಾರೆಡ್ಡಿ ದ್ವಿಚಕ್ರವಾಹನದಲ್ಲಿ ಚಲಿಸುವಾಗ ಅಪಘಾತಕ್ಕೊಳಗಾಗಿದ್ದರು. ಬಳಿಕ ಚಿಕಿತ್ಸೆ ಕೊಡಿಸಿ ಮನೆಗೆ ವಿಶ್ರಾಂತಿ ಪಡೆಯಲು ಮನೆಗೆ ಕರೆತಂದಿದ್ದರು.

ವಿಷಯ ತಿಳಿದ ಬಳಿಕ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆಗೂಡಿ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿ ವಾಪಸಾಗಿದ್ದಾರೆ.

Edited By :
Kshetra Samachara

Kshetra Samachara

08/03/2022 10:55 am

Cinque Terre

774

Cinque Terre

0

ಸಂಬಂಧಿತ ಸುದ್ದಿ