ದೊಡ್ಡಬಳ್ಳಾಪುರ : ಬೌದ್ಧ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮಾರ್ಚ್ 1 ರಂದು ಚಿಕ್ಕಬಳ್ಳಾಪುರದ ಬ್ರಾಹ್ಮಣರ ಸಂಘ ಅಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಡಾ.ಕೆ.ಸುಧಾಕರ್ ಬೌದ್ಧ ಧರ್ಮದ ಅಪಾಯದಿಂದ ಭಾರತವನ್ನ ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆ ಎಂದು ಹೇಳುತ್ತಿದ್ದರು, ಅವರ ಹೇಳಿಕೆ ಖಂಡಿಸಿ ದೊಡ್ಡಬಳ್ಳಾಪುರದ ದಲಿತ ಸಂಘಟನೆಗಳ ಒಕ್ಕೂಟ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.
ಸರ್ವ ಜನರು ಸಮಾನರು, ಸಮಾನತೆಯ ಆಧಾರದ ಮೇಲೆ ಪಂಚಶೀಲ ಮತ್ತು ಅಷ್ಟಾಂಗ ಭೋಧಿಸಿದ ಬುದ್ಧ ಧರ್ಮದಲ್ಲಿ ಸಕಲ ಜೀವಗಳ ಲೇಸನ್ನು ಬಯಸುತ್ತೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಭಾರತವನ್ನು ಗುರುತಿಸುವುದು ಮತ್ತು ಗೌರವಿಸುವುದು ಭಗವಾನ್ ಬುದ್ಧನ ನಾಡು ಎಂದು. ಮನುಷ್ಯರನ್ನ ಮನುಷ್ಯರನ್ನಾಗಿ ಕಾಣದ ಹಿಂದೂ ಧರ್ಮದ ಕಂದಚಾರವನ್ನ ಬಯಲುಗೊಳಿಸಿದ್ದು ಬುದ್ಧ ದಮ್ಮ, ಹಿಂದೂ ಧರ್ಮದ ಅಸಮಾನತೆಯಿಂದ ಬೇಸತ್ತು ಅಂಬೇಡ್ಕರ್ ಸಹ ಬೌದ್ಧ ಧರ್ಮ ಸ್ವೀಕರಿಸಿದರು, ಅಧಿಕಾರ ಮತ್ತು ಹಣಕ್ಕಾಗಿ ಅಪರೇಷನ್ ಕಮಲಕ್ಕೆ ತುತ್ತಾದ ಡಾ.ಕೆ.ಸುಧಾಕರ್ ಪುರೋಹಿತಶಾಹಿಗಳ ಪರವಾಗಿ ನಿಂತಿದ್ದಾರೆ, ಒಂದೇಡೆ ಬೌದ್ಧ ಧರ್ಮದ ಬಗ್ಗೆ ಒಳ್ಳೆಯ ಮಾತನಾಡುವ ಸಚಿವರು ಮತ್ತೊಂದೆಡೆ ಬೌದ್ಧ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಅವರ ಬೌದ್ಧಿಕ ದಿವಾಳಿತನ ತೋರಿಸುತ್ತಿದೆ ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
Kshetra Samachara
07/03/2022 10:03 pm