ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಭಾವಗಳಿಂದ ಸರ್ಕಾರಿ ಜಾಗಗಳು ಒತ್ತುವರಿ ಆರೋಪ; ಜೆಡಿಎಸ್ ಪ್ರತಿಭಟನೆ

ಬೆಂಗಳೂರು: ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗಗಳನ್ನು ಕೂಡಲೇ ತೆರವುಗೊಳಿಸಬೇಕು ಹಾಗೂ ಬಡವರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಕೆ.ಆರ್.ಪುರದ ತಾಲೂಕು ಕಚೇರಿ ಮುಂದೆ ಮಹದೇವಪುರ ಜೆಡಿಎಸ್ ನ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಜೆಡಿಎಸ್ ಮುಖಂಡ ಸತೀಶ್ ಅವರು, ಕೋನದಾಸಪುರ ಗ್ರಾಮದ ಸರ್ವೇ 10, 11 ಜಿಲ್ಲಾಧಿಕಾರಿಗಳ ಮತ್ತು ಉಚ್ಚ ನ್ಯಾಯಾಲಯ ಆದೇಶಗಳನ್ನು ಹಾಗೂ ಮಹದೇಹಪುರ ಕ್ಷೇತ್ರದ ಎ.ಟಿ.ರಾಮಸ್ವಾಮಿ ಆಯೋಗದ ವರದಿಯನ್ನು ಉಲ್ಲಂಘಿಸಿದ್ದಾರೆ.

ಸರ್ಕಾರಿ ಜಮೀನುಗಳನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿ ಅಕ್ರಮವಾಗಿ ದಾಖಲಾತಿಗಳನ್ನು ಸೃಷ್ಟಿಸಲಾಗಿದೆ. ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರದ ಮುಳ್ಳೂರು, ಪಟ್ಟಂದೂರು ಅಗ್ರಹಾರ, ದೇವರ ಬೀಸನಹಳ್ಳಿ, ಚೀಮಸಂದ್ರ, ಮಂಡೂರು, ಹಾಗೂ ಕಾಚಾಮರನಹಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಹಲವು ಸರ್ಕಾರಿ ಜಾಗಗಳು ಒತ್ತುವರಿಯಾಗಿದ್ದು, ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಅಕ್ರಮವಾಗಿ ರಾತ್ರೋರಾತ್ರಿ ರೆಕಾರ್ಡ್ ನಲ್ಲಿ ದಾಖಲೆಗಳನ್ನು ತಿದ್ದುಪಡಿ ಮಾಡುತ್ತಿದ್ದು, ಒತ್ತುವರಿ ಜಾಗವನ್ನು ಸಂಬಂಧಪಟ್ಟ ಅಧಿಕಾರಿಗಳು ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸಿ ಕೂಡಲೇ ತೆರವುಗೊಳಿಸಿ, ಬಡವರಿಗೆ 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

04/03/2022 03:26 pm

Cinque Terre

1.2 K

Cinque Terre

0

ಸಂಬಂಧಿತ ಸುದ್ದಿ