ಬೆಂಗಳೂರು : ಕಲಬುರಗಿ ಪ್ರವೇಶಕ್ಕೆ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್, ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮತ್ತು ಭಜರಂಗದಳ ಮುಖ್ಯಸ್ಥ ಚೈತ್ರಾ ಕುಂದಾಪುರ ಅವರಿಗೆ ಅವಕಾಶ ನೀಡಬೇಕು ಎಂದು ಇಂದು ಶ್ರೀರಾಮ ಸೇನೆ ಬೆಂಗಳೂರು ವತಿಯಿಂದ ಬೆಂಗಳೂರು ಡಿಸಿ ಮೂಲಕ ಕಲಬುರಗಿ ಡಿಸಿಯವರಿಗೆ ಮನವಿ ಸಲ್ಲಿಸಲಾಗಿದೆ.
ಕುಬುರಗಿಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಾರ್ಚ್ 1 ರಂದು ಸಂದಲ್ ಮತ್ತು ಶಬ್-ಏ-ಬರಾತ್ ಕಾರ್ಯಕ್ರಮ ಇದ್ದು, ಅದೇ ದಿನ ಮಹಾಶಿವರಾತ್ರಿ ಇರುವುದರಿಂದ ದರ್ಗಾದಲ್ಲಿರುವ ಶಿವಲಿಂಗದ ಶುದ್ಧೀಕರಣ ಕಾರ್ಯಕ್ರಮಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಕರೆ ನೀಡಿದ್ದಾರೆ. ಫೆ.27ಕ್ಕೆ ಆಳಂದ ಚಲೋ ಕಾರ್ಯಕ್ರಮಕ್ಕೆ ಕರೆ ನೀಡಿದ್ದರು.
ಈ ಹಿನ್ನೆಲೆ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವ ಕಾರಣ ಫೆ.27 ರಿಂದ ಮಾ.3 ರ ವರೆಗೆ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್, ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮತ್ತು ಭಜರಂಗದಳ ಮುಖ್ಯಸ್ಥ ಚೈತ್ರಾ ಕುಂದಾಪುರ ಅವರನ್ನು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಆದೇಶ ಹೊರಡಿಸಿದ್ದರು.
Kshetra Samachara
28/02/2022 08:43 pm