ಆನೇಕಲ್ : ಸರ್ಕಾರಿ ಜಾಗದಲ್ಲಿ ಬಡವರ ಮನೆ ಕಟ್ಟಿಕೊಂಡರೇ ತೆರವು ಮಾಡಲಾಗುತ್ತೆ, ಆದರೆ ಅದೇ ಜಾಗದಲ್ಲಿ ಶ್ರೀಮಂತರು ಮನೆ ಕಟ್ಟೋದಕ್ಕೆ ಯಾವುದೇ ತಡೆಯಿಲ್ಲ ಎಂದು ಆರೋಪಿಸಿ ಬನ್ನೇರುಘಟ್ಟ ಪಂಚಾಯತಿಯ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕಳೆದ 1 ವರ್ಷದ ಹಿಂದೆ ಬನ್ನೇರುಘಟ್ಟ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್ 02 ರಲ್ಲಿ ಏಳು ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಲಾಗಿತ್ತು.
ಆ ಜಾಗದಲ್ಲಿ ಕೆಲ ಬಡವರು ಮನೆ ಕಟ್ಟಿಕೊಂಡಿದ್ದರು, ಕೆಲ ದಿನಗಳ ಬಳಿಕ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದಾರೆ ಎಂದು ಅರೋಪಿಸಿ ಆ ಮನೆಗಳನ್ನು ತೆರವುಗೊಳಿಸಿದರು. ಸದ್ಯ ಅದೇ ಜಾಗದಲ್ಲಿ ಈ ನಡುವೆ ಬಿಜೆಪಿ ಮುಖಂಡರ ಕುಮ್ಮಕ್ಕಿನಿಂದ ತಮಗೆ ಬೇಕಾದ ಜನರಿಗೆ ಹಾಗೂ ಶ್ರೀಮಂತರಿಗೆ ಮನೆ ಕಟ್ಟಿಕೊಳ್ಳುವುದಕ್ಕೆ ಪಂಚಾಯಿತಿ ಅಧಿಕಾರಿಗಳು ಅನುಮತಿ ಕೊಟ್ಟಿರುವುದು ಇಲ್ಲಿನ ಜನರಿಗೆ ಆಕ್ರೋಶಕ್ಕೆ ಕಾರಣವಾಗಿದೆ.
ಪಂಚಾಯಿತಿ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರುಗಳ ಕುಮ್ಮಕ್ಕಿನಿಂದ ಅಕ್ರಮವಾಗಿ ಮನೆ ಕಟ್ಟಿದ್ದಾರೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇನ್ನು ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ಹಂಚುವ ಕೆಲಸ ಮಾಡಿದ್ದರೆ ಯಾರಿಗೂ ತೊಂದರೆ ಆಗುತ್ತಿರಲಿಲ್ಲ ಎಂದು ಊರಿನ ಗ್ರಾಮಸ್ಥರು ತಮ್ಮ ಅಳನನ್ನ ತೋಡಿಕೊಂಡಿದ್ದಾರೆ.
ಹರೀಶ್ ಗೌತಮ್ ನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
Kshetra Samachara
28/02/2022 07:31 pm