ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟು ಸ್ಟ್ರೋಕ್ ಟು ಫೋರ್ ಸ್ಟ್ರೋಕ್ ಗೆ ಅಪ್ಡೇಟ್ ಆಗಲಿರುವ ಆಟೋ ; ಕಂಗಾಲಾದ ರಿಕ್ಷಾ ಡ್ರೈವರ್ಸ್

ಬೆಂಗಳೂರು: ಆಟೋ ಮೀಟರ್ ದರ ಪರಿಷ್ಕರಣೆ ಮಾಡಿ ಗುಡ್ ನ್ಯೂಸ್ ಕೊಟ್ಟಿದ್ದ ಸರ್ಕಾರ ಇದೀಗ ಆಟೋ ಮಾಲೀಕರಿಗೆ ಬಿಗ್ ಶಾಕ್​ವೊಂದನ್ನು ಕೊಟ್ಟಿದೆ.

ಹೌದು , ಬೆಂಗಳೂರಿನಲ್ಲಿ 10 ಸಾವಿರ ಆಟೋ ಚಾಲಕರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಲಿದೆ. ಯಾಕಂದ್ರೆ, ರಾಜಧಾನಿಯಲ್ಲಿ ಮಾರ್ಚ್ 31 ರಿಂದ ಟು-ಸ್ಟ್ರೋಕ್ ಆಟೋಗಳು ರಸ್ತೆಗೆ ಇಳಿಯುವಂತಿಲ್ಲ. ಇದರಿಂದಾಗಿ ಸಾವಿರಾರು ಆಟೋ ಚಾಲಕರ ಪಾಡೇನು ಎಂಬ ಪ್ರಶ್ನೆ‌ ‌ಎದುರಾಗಿದೆ.‌

ವಾಯು ಮಾಲಿನ್ಯ ನಿಯಂತ್ರಣ ಮಾಡುವ ಸಲುವಾಗಿ ಟು- ಸ್ಟ್ರೋಕ್ ಕಂಪ್ಲೀಟ್ ಬ್ಯಾನ್​ ಮಾಡಲು ಸರ್ಕಾರ ನಿರ್ಧರಿಸಿದ್ದು, ಏಪ್ರಿಲ್ 1 ರಿಂದ ಟು-ಸ್ಟ್ರೋಕ್ ಆಟೋ ಸಂಚಾರ ಮಾಡುವಂತಿಲ್ಲ. ‌ಹೆಚ್ಚು ಹೊಗೆ ಉಗುಳೋ ಕಾರಣದಿಂದ ಟು-ಸ್ಟ್ರೋಕ್ ನಿಷೇಧ ಮಾಡಲಾಗುತ್ತಿದ್ದು, ಎರಡು ವರ್ಷಗಳ ಹಿಂದೆ ಟು-ಸ್ಟ್ರೋಕ್ ಸ್ಕ್ರ್ಯಾಫ್ ಮಾಡಿ 4 ಸ್ಟ್ರೋಕ್ ಖರೀದಿಸುವಂತೆ ಸೂಚಿಸಲಾಗಿತ್ತು.‌ ಆದ್ರೆ ಕೋವಿಡ್ ಪರಿಣಾಮ ಚಾಲಕರ ಆರ್ಥಿಕ ಸಮಸ್ಯೆಯಿಂದ 4 ಸ್ಟ್ರೋಕ್ ಮಾರ್ಪಾಡು ಆಗಲಿಲ್ಲ.ಇದೀಗ ಸರಕಾರದ ಈ ನೀತಿಯಿಂದ ರಿಕ್ಷಾ ಚಾಲಕರು ಕಂಗಾಲಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

24/02/2022 10:34 pm

Cinque Terre

2.13 K

Cinque Terre

0

ಸಂಬಂಧಿತ ಸುದ್ದಿ