ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಹೈದರಾಬಾದಿನಲ್ಲಿ‌ ಗುಂಡಿಟ್ಟಂತೆ ಹರ್ಷನ ಕೊಂದವರಿಗೆ ಗುಂಡಿಕ್ಕಿ"

ಯಲಹಂಕ: "ಬಹುಸಂಖ್ಯಾತರ ಭಾರತದಲ್ಲಿ ಅಲ್ಪಸಂಖ್ಯಾತರ ಉಪಟಳ ಹೆಚ್ಚಾಗ್ತಿದೆ. ಹಿಜಾಬ್ ವಿವಾದ ಭುಗಿಲೆದ್ದು, ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಆದರೂ ಅಲ್ಪಸಂಖ್ಯಾತರ ಮಕ್ಕಳು ಹಿಜಾಬ್ ನೊಂದಿಗೆ ಶಾಲಾ- ಕಾಲೇಜಿಗೆ ಬಂದು ಹೈಕೋರ್ಟ್ ಆದೇಶವನ್ನೇ ಧಿಕ್ಕರಿಸಿ, ಕ್ಯಾರೇ ಎನ್ನುತ್ತಿಲ್ಲ ಎಂದು ಹಿಂದೂ ಮುಖಂಡ ಗೋಪಾಲಕೃಷ್ಣ ಹರಿಹಾಯ್ದರು.

ಬೆಂಗಳೂರು ಉತ್ತರದ ಕೊಡಿಗೇಹಳ್ಳಿ ಮತ್ತು ಹೆಬ್ಬಾಳದಲ್ಲಿ ಇಂದು ಸಂಜೆ 6ಕ್ಕೆ ಶಿವಮೊಗ್ಗದಲ್ಲಿ ಹರ್ಷನ ಕೊಂದವರ ಬಂಧಿಸಲು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಹರ್ಷನ ಹತ್ಯೆ ಸಂಚಿನ ಎಲ್ಲಾ

ದುಷ್ಕೃರ್ಮಿಗಳನ್ನು ತಕ್ಷಣ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತೀವಿ ಎಂದು ಎಚ್ಚರಿಸಿದರು.

ಇನ್ನು, ಬೆಂಗಳೂರು ಉತ್ತರ ಕೊಡಿಗೇಹಳ್ಳಿ ಗೇಟ್ ನ ಶ್ರೀ ಗುಂಡಾಂಜನೇಯ ದೇವಸ್ಥಾನ ಬಳಿ ಕೊಡಿಗೇಹಳ್ಳಿ, ಸಹಕಾರನಗರ, ಬ್ಯಾಟರಾಯನಪುರದ ನೂರಾರು ಹಿಂದೂ ಪರ ಕಾರ್ಯಕರ್ತರು ಜಮಾವಣೆಯಾಗಿ ಹರ್ಷನ ಆತ್ಮಕ್ಕೆ ಚಿರಶಾಂತಿ ಕೋರಿ ದೀಪ ಹಚ್ಚಿದರು.

"ಹರ್ಷನ ಆತ್ಮಕ್ಕೆ ಶಾಂತಿ ಸಿಗಬೇಕಂದ್ರೆ, ಹತ್ಯೆ ಮಾಡಿದವರಿಗೆ ಹೈದರಾಬಾದ್ ನ ಅತ್ಯಾಚಾರಿಗಳಿಗಾದಂತೆ ಗುಂಡೇಟು ನೀಡಿ ಶಿಕ್ಷಿಸಬೇಕೆಂದು ಹಿಂದೂ ಸಂಘಟನೆ ಹೋರಾಟಗಾರರು ಸರ್ಕಾರಕ್ಕೆ ಒತ್ತಾಯಿಸಿದರು. ಇನ್ನೆಷ್ಟು ಜನ‌ ಹಿಂದೂ ಯುವಕರ ಹತ್ಯೆಗಳಾಗಬೇಕು. ನಮಗೆ ಮಾತ್ರ ಕಾನೂನು ಅನ್ವಯಿಸುತ್ತಾ? ಅಲ್ಪಸಂಖ್ಯಾತರು ಹೇಗ್ ಬೇಕೋ ಆ ರೀತಿ ಬದುಕುತ್ತಿದ್ದಾರೆ. ನಮಗೆ ಮೆರವಣಿಗೆ, ಪ್ರತಿಭಟನೆಗೆ ಅವಕಾಶ ಕೊಡಲ್ಲ. ಸರ್ಕಾರಗಳೇ, ವೋಟ್ ಬ್ಯಾಂಕ್ ರಾಜಕೀಯ ಬಿಡಿ" ಎಂದು ಹಿಂಜಾವೇ ಮುಖಂಡ ರವಿಕುಮಾರ್, ಸರ್ಕಾರವನ್ನು ಪ್ರಶ್ನಿಸಿದರು.

- SureshBabu Public Next Yalahanka

Edited By : Nagesh Gaonkar
Kshetra Samachara

Kshetra Samachara

22/02/2022 10:03 am

Cinque Terre

2.02 K

Cinque Terre

0

ಸಂಬಂಧಿತ ಸುದ್ದಿ