ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆಮಾಲಿಕನ ಕಿರುಕುಳ ಆರೋಪ,ಆತ್ಮಹತ್ಯೆ ಶರಣಾದ ಮನೆಗೆಲಸಗಾರ್ತಿ

ಬೆಂಗಳೂರು: ಮನೆ ಕೆಲಸ ಮಾಡುತ್ತಿದ್ದ ಉಮಾ ಎಂಬ ಮಹಿಳೆ, ಕೆಲಸ ಮಾಡುತ್ತಿದ್ದ ಮನೆ ಮಾಲೀಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು, ನ್ಯಾಯ ಒದಗಿಸುವಂತೆ ಕೋರಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಮನೆ ಕೆಲಸಗಾರರ ಸಂಘಟನೆ, ಕೆಆರ್ ಪುರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಮನೆ ಮಾಲೀಕರು ಮಹಿಳೆ ವಿರುದ್ಧ ಕಳ್ಳತನದ ಆರೋಪ ಹೊರಿಸಿದ್ದಾರೆ.ಮಹಿಳೆಯನ್ನು ಮೂರು ದಿನಗಳಿಂದ ಠಾಣೆಯಲ್ಲಿ ಕೂರಿಸಿಕೊಂಡು ಅಮಾನವೀಯ ವಾಗಿ ಪೊಲೀಸರು ವರ್ತಿಸಿದ್ದಾರೆಂದು ಆರೋಪಿಸಿದರು.ಅದಕ್ಕಾಗಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

15/02/2022 06:57 pm

Cinque Terre

1.29 K

Cinque Terre

0

ಸಂಬಂಧಿತ ಸುದ್ದಿ