ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೊಮ್ಮನಹಳ್ಳಿ: "ನ್ಯಾ. ಮಲ್ಲಿಕಾರ್ಜುನ ಗೌಡ ವಜಾಗೊಳಿಸಿ"; ಫೆ. 19ರಂದು ಪ್ರತಿಭಟನೆ

ಬೊಮ್ಮನಹಳ್ಳಿ: ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ಅವರನ್ನು ಸೇವೆಯಿಂದ ವಜಾ ಮಾಡಲು ಒತ್ತಾಯಿಸಿ ಹಾಗೂ ದಲಿತ ಪರ ಹಕ್ಕುಗಳಿಗೆ ಆಗ್ರಹಿಸಿ ಫೆ.19ರಂದು ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿ ಕೊಂಡಿದೆ.

ಈ ಹಿನ್ನೆಲೆಯಲ್ಲಿ ದಲಿತ ಪರ ಸಂಘಟನೆಗಳಿಂದ ಹೊಸರೋಡು ಸಿಂಗಸಂದ್ರ ಎಸಿಸಿ ಲೇಔಟ್ ನಲ್ಲಿ ಪತ್ರಿಕಾಗೋಷ್ಠಿ ಜರುಗಿತು.

ಇನ್ನು, ಪ್ರತಿಭಟನೆಗೆ ಹೊಸರೋಡು ಭಾಗದ ದಲಿತ ಪರ ಸಂಘಟನೆಗಳು ಬೆಂಬಲ ಸೂಚಿಸಿದೆ. ವಿಧಾನಸೌಧದಿಂದ ಹೈಕೋರ್ಟ್ ವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಯಲಿದ್ದು, ಸಹಸ್ರಾರು ಮಂದಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

15/02/2022 09:53 am

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ