ಯಲಹಂಕ: ಹಿಜಾಬ್ ವಿವಾದವನ್ನು ಕಾಂಗ್ರೆಸ್ ಬೆಳೆಸಿ, ಪೋಷಿಸುತ್ತಿದೆ. ಸಿದ್ದರಾಮಯ್ಯ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ದಕ್ಕೆ ತರ್ತಿದ್ದಾರೆ. ಶಾಲೆ ಎಂಬ ಜ್ಞಾನದೇಗುಲದಲ್ಲಿ ಮಕ್ಕಳೆಲ್ಲರೂ ಒಂದೇ. ಸರ್ಕಾರ ಶಾಂತಿ ಕಾಪಾಡಲು ಮೃದು ಧೋರಣೆ ಅನುಸರಿಸುತ್ತಿದೆ. ಹಿಂದೂಗಳು ಕೇಸರಿ ಶಾಲು ಧರಿಸುತ್ತಾರೆ. ನಾವು ಕರೆ ಕೊಟ್ಟರೆ ಏನು ಬೇಕಾದರೂ ಆಗ್ತದೆ ಎಂದು ವಿಶ್ವನಾಥ್ ಕಾಂಗ್ರೆಸ್ ಮುಖಂಡರಿಗೆ ಟಾಂಗ್ ಕೊಟ್ಟಿದ್ದಾರೆ.
ಮುಸ್ಲಿಂ ಧರ್ಮದಲ್ಲಿ ಕಳ್ಳತನ ಮಾಡಿದರೆ ಕೈ ಕತ್ತರಿಸುತ್ತಾರೆ. ಅತ್ಯಾಚಾರ ಮಾಡಿದ್ರೆ ಕಲ್ಲೊಡೆದು ಶಿಕ್ಷಿಸುತ್ತಾರೆ. ಹಣ & ಬಡ್ಡಿ ವ್ಯವಹಾರ ಮಾಡುವಂತಿಲ್ಲ. ಇದನ್ನೆಲ್ಲ ಸಿದ್ದಣ್ಣ ಮುಸ್ಲಿಂ ಸಮುದಾಯಕ್ಕೆ ಹೇಳ್ತಾರಾ..!? ಎಂದು ಪ್ರಶ್ನಿಸಿದರು. ಕೇಸರಿ ಪೇಟಾ ಹಾಕಿಕೊಂಡರೆ ಕಿತ್ತೆಸೆಯೋದು, ಮುಸ್ಲಿಂ ಪೇಟಾ ಹಾಕಿಕೊಂಡು ಟಿಪ್ಪುಸುಲ್ತಾನ್ ನನ್ನು ವೈಭವೀಕರಿಸೋದು ಒಳ್ಳೆಯದಲ್ಲ ಎಂದರು.
ಬಹುಸಂಖ್ಯಾತರನ್ನು ಕೆಣಕುವುದು ಬೇಡ. ನಿಮ್ಮ ಕೊಳಕು ರಾಜಕಾರಣದಿಂದ ಬೇಸತ್ತು ಇಂದು ಸಾವಿರಕ್ಕೂ ಹೆಚ್ಚು ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನಲ್ಲಿದ್ದ ಮನುಗೌಡ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸಿಂಗನಾಯಕನಹಳ್ಳಿ ಪುನೀತ್ ರಾಜ್ ಕುಮಾರ್ ಆಡಿಟೋರಿಯಂನಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ನೂರಾರು ಮಂದಿ ಆಟೋಚಾಲಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದರು.
PublicNext
06/02/2022 09:21 pm