ಯಲಹಂಕ: ದೇವನಹಳ್ಳಿ ಏರ್ಪೋರ್ಟ್ ರಸ್ತೆ ಹುಣಸಮಾರನಳ್ಳಿಯ ಕಲ್ಯಾಣಿ ಮೋಟಾರ್ಸ್ ಮಾರುತಿ ಸುಜುಕಿ ಕಾರುಮಳಿಗೆಯ ನಾಮಫಲಕದಲ್ಲಿ ಕನ್ನಡ ಕಡೆಗಣಿಸಲಾಗಿದೆ.. ಇಂಗ್ಲೀಷ್ ಭಾಷೆ ರಾರಾಜಿಸುತ್ತಿರುವುದನ್ನು ಖಂಡಿಸಿ ಜಯಕರ್ನಾಟಕ ಜನಪರ ವೇದಿಕೆ ಇಂದು ಪ್ರತಿಭಟನೆ ನಡೆಸಿತು.
ಜನಪರವೇದಿಕೆ ಕಾರ್ಯಕರ್ತರು ಕಲ್ಯಾಣಿ ಮೋಟಾರ್ಸ್ ಮುಂಭಾಗ ಕನ್ನಡ ವಿರೋಧಿ ನೀತಿಗೆ ಧಿಕ್ಕಾರ ಕೂಗಿ, ಕನ್ನಡ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿದರು.. ಕಲ್ಯಾಣಿ ಮೋಟಾರ್ಸ್ನವರು ಇಂಗ್ಲೀಷ್ ಭಾಷೆಲಿ ನಾಮಫಲಕ ಅಳವಡಿಸಿ ಕನ್ನಡನ ಕಡೆಗಣಿಸಿದ್ದಾರೆ. ರಾಜ್ಯದ ಅಂಗಡಿ, ಹೊಟೇಲ್, ಕಂಪನಿ ಪರವಾನಗಿ ಪಡೆದವರು ನಾಮಫಲಕದಲ್ಲಿ ಪ್ರಥಮವಾಗಿ ಕನ್ನಡ ಬಳಸುವುದು ಕಡ್ಡಾಯ ಎಂದು ವಾಣಿಜ್ಯ ಕೈಗಾರಿಕೆ ಆದೇಶ ತಿಳಿಸಿದೆ.. ಹೀಗಿದ್ದರೂ ಕನ್ನಡದಲ್ಲಿ ನಾಮಫಲಕ ಅಳವಡಿಸಲು ತಾತ್ಸಾರ ತೋರುತ್ತಿದ್ದಾರೆ ಎಂದು ಹೊರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಹುಣಸಮಾರನಹಳ್ಳಿ ಪುರಸಭೆಗೂ ಸಂಘಟನೆ ಮನವಿ ನೀಡಿ, ಕಲ್ಯಾಣ್ ಮೊಟಾರ್ಸ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.. ಇನ್ನು ಮಾರ್ನಾಲ್ಕು ದಿನಗಳಲ್ಲಿ ಕನ್ನಡ ನಾಮಫಲಕ ಅಳವಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು..
Kshetra Samachara
05/02/2022 11:48 pm