ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ನೇತೃತ್ವದಲ್ಲಿ ಇಂದು ಕೋವಿಡ್ ಕುರಿತಾದ ಮಹತ್ವದ ಸಭೆ

ಬೆಂಗಳೂರು: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು‌ ಮಹತ್ವದ ಕೋವಿಡ್ ಸಭೆ ನಡೆಯಲಿದ್ದು, ನೈಟ್ ಕರ್ಫ್ಯೂ ಸಡಿಲಿಕೆ ಸೇರಿದಂತೆ ಬೆಂಗಳೂರಲ್ಲಿ ಶಾಲಾರಂಭದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಯಲಿದ್ದು, ಕೋವಿಡ್ ತಜ್ಞರು, ಸಚಿವರು, ಹಿರಿಯ ಅಧಿಕಾರಿಗಳ ಜತೆ ಕೋವಿಡ್ ಸ್ಥಿತಿಗತಿ, ನಿರ್ಬಂಧಗಳ ಸಡಿಲಿಕೆ ಸಂಬಂಧ ಚರ್ಚೆ ನಡೆಯಲಿದೆ. ಸದ್ಯ ಜಾರಿಯಲ್ಲಿರುವ ಶೇ 50 ರಷ್ಟು ರೂಲ್ಸ್​ಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಹೋಟೆಲ್​ ಉದ್ಯಮ, ಮದ್ಯ ಮಾರಾಟ ಉದ್ಯಮ, ಸಿನಿಮಾ, ನಾಟಕ ರಂಗಗಳಿಂದ ವಿರೋಧ ವ್ಯಕ್ತವಾಗಿದೆ.

ಜಿಲ್ಲಾವಾರು ಶೇ50ರಷ್ಟು ರೂಲ್ಸ್ ತೆಗೆಯುವಂತೆ ಬಹುತೇಕ ಸಚಿವರು, ಶಾಸಕರಿಂದಲೂ ಒತ್ತಾಯ ಕೇಳಿ ಬಂದಿದೆ. ಇಂದಿನ‌ ಸಭೆಯಲ್ಲಿ ಶೇ 50ರ ರೂಲ್ಸ್ ಸಡಿಲಿಕೆ ಅಥವಾ ತೆರವು ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ ನೈಟ್ ಕರ್ಫ್ಯೂ ಅವಧಿ ಕಡಿತಕ್ಕೂ ಒತ್ತಾಯ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಹೀಗಾಗಿ ನೈಟ್ ಕರ್ಫ್ಯೂ ಅವಧಿ ಕಡಿತ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ತಜ್ಞರು ನೀಡಿರುವ ವರದಿ ಆಧಾರದಲ್ಲಿ ಕೆಲ ನಿರ್ಬಂಧ ಸಡಿಲಿಸುವ ಸಾಧ್ಯತೆ ಬಹುತೇಕ ಹೆಚ್ಚಿದೆ. ಇತ್ತ ಕೊರೊನಾ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಇನ್ನಷ್ಟು ಸಡಿಲಿಕೆ ಮಾಡುವ ಸಾಧ್ಯತೆ ಇದೆ. ಉಳಿದಂತೆ ಸಭೆ, ಸಮಾರಂಭ, ಸಮಾವೇಶಗಳಿಗೆ ಜನರ ಮಿತಿ ಕೆಲ ದಿನ ಮುಂದುವರಿಯುವ ಸಾಧ್ಯತೆ ಇದೆ.

Edited By :
PublicNext

PublicNext

29/01/2022 11:53 am

Cinque Terre

16.1 K

Cinque Terre

0

ಸಂಬಂಧಿತ ಸುದ್ದಿ