ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನವೆಸಗಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರನ್ನು ದೇಶದಿಂದಲೇ ಗಡೀಪಾರು ಮಾಡಬೇಕು ಎಂಬ ಒತ್ತಾಯದ ಆಕ್ರೋಶ ಭುಗಿಲೆದ್ದಿದೆ.
ಗಣರಾಜ್ಯೋತ್ಸವ ದಿನದಂದೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸಗಲಾಗಿದೆ. ಮಹಾತ್ಮ ಗಾಂಧೀಜಿ ಭಾವಚಿತ್ರದ ಜೊತೆ ಅಂಬೇಡ್ಕರ್ ಅವರ ಭಾವಚಿತ್ರವನ್ನೂ ಇಟ್ಟು ಧ್ವಜಾರೋಹಣಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಂಬೇಡ್ಕರ್ ಭಾವಚಿತ್ರ ತೆಗೆದರೆ ಮಾತ್ರ ನಾನು ಧ್ವಜಾರೋಹಣ ಮಾಡ್ತೇನೆ ಎಂದು ಮಲ್ಲಿಕಾರ್ಜುನ ಗೌಡ ಹಠ ಹಿಡಿದರು. ಆಯೋಜಕರು ಭಾವಚಿತ್ರ ತೆಗೆದ ನಂತರ ಧ್ವಜಾರೋಹಣ ಜರುಗಿತು.
ರಾಯಚೂರು ಜಿಲ್ಲಾ ನ್ಯಾಯಾಧೀಶರ ಈ ನಡೆಯ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಪ್ರತಿಭಟನೆ ನಡೆಸಲಾಗ್ತಿದೆ. ಇಂದು ಬೆಂಗಳೂರಿನ ಹೆಣ್ಣೂರಿನಲ್ಲಿ ನ್ಯಾಯಾಧೀಶರ ವಿರುದ್ಧ ಅಂಬೇಡ್ಕರ್ ಅಭಿಮಾನಿಗಳು ಧಿಕ್ಕಾರ ಕೂಗಿ, ತಮ್ಮ ಆಕ್ರೋಶ ಹೊರಹಾಕಿದರು. ಈ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಬೇಕು. ಇಂತಹ ವಿಕೃತ ಮನಸ್ಸಿನವರನ್ನು ಕೂಡಲೇ ಗಡೀಪಾರು ಮಾಡಬೇಕೆಂದೂ ಒತ್ತಾಯಿಸಲಾಯಿತು.
PublicNext
27/01/2022 10:00 pm