ವಿಶೇಷ ವರದಿ - ಗಣೇಶ್ ಹೆಗಡೆ
ಬೆಂಗಳೂರು : ಬಿಬಿಎಂಪಿ ಚುನಾವಣೆ ಮುಗಿದು ಸರಿ ಸುಮಾರು ಒಂದುವರೆ ವರ್ಷಗಳ ಕಾಲ ಮುಗಿದೇ ಹೋಯ್ತು. ಆದ್ರೆ ನಾನಾ ಕಾರಣಗಳಿಂದ ಬಿಬಿಎಂಪಿ ಚುನಾವಣೆ ಮುಂದೂಡಿಕೆ ಯಾಗುತ್ತಲೇ ಇದೆ. ಇದಕ್ಕೆ ಬೃಹತ್ ಬೆಂಗಳೂರು ಮಹಾನಗರದಲ್ಲಿರುವ ಎಲ್ಲಾ ಪಕ್ಷದ ಶಾಸಕರು ಮೆಗಾ ಪ್ಲಾನ್ ಒಂದನ್ನ ರೂಪಿಸಿದ್ದಾರೆ. ಚುನಾವಣೆಯನ್ನ ಸರಿಯಾದ ಸಮಯಕ್ಕೆ ಮಾಡದೆ ಇರಲು ಕಾರಣ ಏನು ? ಬೆಂಗಳೂರಿನ ಶಾಸಕರ ಪ್ಲಾನ್ ಗಳೇನು ಅನ್ನೋದನ್ನ ನೋಡೋಣ.
198 ವಾಡ್ ೯ ನಿಂದ 243 ವಾಡ್೯ ಆಗೋದ್ರಿಂದ ಶಾಸಕರಿಗಾಗುವ ಲಾಭ ಏನು ಅಂತ ನೋಡೋದಾದ್ರೆ.
50 ರಿಂದ 70, 80 ಸಾವಿರ ಮತದಾನ ಹೊಂದಿರೋ ಕಡೆ ಎರಡು ಮೂರು ವಾಡ್೯ ಮಾಡೋ ಮೂಲಕ ಪಾಲಿಕೆ ಸದಸ್ಯರ ಅಧಿಕಾರ ಹಾಗೂ ವ್ಯಾಪ್ತಿ ಮೊಟಕು ಗೊಳಿಸುವುದರ ಜೊತೆಗೆ ಹಳಬರನ್ನ ಬಿಟ್ಟು ಹೊಸಬರಿಗೆ ಅವಕಾಶ ಕೊಡೋದು ಶಾಸಕರ ಪ್ಲಾನ್ ಆಗಿದೆ.
ಇನ್ನೂ ಚುನಾವಣೆ ಯಾಕೆ ಬೇಡಾ ಅಂತಿದ್ದಾರೆ. ಅನ್ನೋದಕ್ಕೂ ಕೂಡಾ ಒಂದು ಭಲವಾದ ಕಾರಣ ಇದೆ. ಅದು ಹೇಗೆ ಅಂದ್ರೆ - ಸದ್ಯ ಒಂದೊಂದು ವಾಡ್೯ ನಲ್ಲಿ ಎಲ್ಲಾ ಪಕ್ಷದಲ್ಲೂ 3 ರಿಂದ 4 ಜನ ಆಕಾಂಕ್ಷಿಗಳು ಇರ್ತಾರೆ ಅವರನ್ನ ಮನವೊಲಿಸಿ ಟಿಕೆಟ್ ಕೊಡೋದು ಕಷ್ಟ. ಅದರಲ್ಲಿ ಒಬ್ಬನೇ ಗೆಲ್ತಾನೆ ನಂತರ ನಮ್ಮ ಶಾಸಕರ ಚುನಾವಣೆಯಲ್ಲೂ ಒಬ್ಬನೇ ಕೆಲಸ ಮಾಡ್ತಾನೆ. ಉಳಿದ ಮೂರು ಜನ ನಮ್ಮ ವಿರುದ್ಧವೇ ಕೆಲಸ ಮಾಡ್ತಾರೆ. ಇದರಿಂದ ನಮಗೆ ನಷ್ಟ ಅಗುತ್ತೆ. ಚುನಾವಣೆ ಇಲ್ಲ ಅಂದ್ರೆ ನಮಗೆ ಟಿಕೆಟ್ ಸಿಗುತ್ತೆ ಅನ್ನೋ ಜೋಶ್ ನಲ್ಲಿ ನಮ್ಮ ಚುನಾವಣೆಯಲ್ಲಿ ಎಲ್ಲರೂ ಕೆಲಸ ಮಾಡ್ತಾರೆ - ಪಕ್ಷ ಸಂಘಟನೆ ಕೂಡಾ ಮಾಡ್ತಾರೆ. ಅನ್ನೋದು ಶಾಸಕರ ಇನ್ನೊಂದು ಪ್ಲಾನ್ ಆಗಿದೆ.
ಇದೇ ವೇಳೆ ಶಾಸಕರ ಮಗದೊಂದು ಐಡಿಯಾ ಏನಂದ್ರೆ, ಸದ್ಯ ಕೊರೋನಾ ಮೊದಲನೇ ಅಲೆ ಎರಡನೇ ಅಲೆ ಮೂರನೇ ಅಲೆ ಸೇರಿದಂತೆ ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಯಾವ ಅಭಿಪ್ರಾಯ ಇದಿಯೋ ಗೊತ್ತಿಲ್ಲ.
ಕೊರೋನಾ ಸಂಕಷ್ಟದಲ್ಲಿ ಜನರ ಅಭಿಪ್ರಾಯ ಬೇರೆ ಆಗಿದ್ರು ಆಗಿರಬಹುದು.
ಇದ್ರಿಂದ ಸಾರ್ವತ್ರಿಕ ಚುನಾವಣೆ ಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಿದ್ರೆ. ನಮ್ಮ ವೀಕ್ನೆಸ್ ಮತ್ತೆ ಸ್ಟ್ರೆಂತ್ ಎರಡೂ ಗೊತ್ತಾಗಲಿದೆ. ಆಮೇಲೆ ನಮಗೆ ಇನ್ನೂ ಅವಕಾಶ ಇರುತ್ತೆ ಅದನ್ನ ಸರಿಪಡಿಗೊಂಡ್ರೆ ನಮಗೆ ಗೆಲ್ಲಲು ಅನುಕೂಲ ಆಗುತ್ತೆ. ಅಂತ ಬಿಬಿಎಂಪಿ ಪ್ರತಿನಿಧಿಗಳ ಮೇಲೆ ಚುನಾವಣಾ ಪ್ರಯೋಗ ಮಾಡಿ ಕಾರ್ಪೊರೇಟರ್ ಗಳನ್ನ ಬಲಿ ಪಶು ಮಾಡೋದು.
ಹೀಗೆ ಶಾಸಕರ ಮಾಸ್ಟರ್ ಪ್ಲಾನ್ ನಿಂದ ಪಾಲಿಕೆ ವ್ಯಾಪ್ತಿಯ ನಾಗರೀಕರು ಕಂಗಾಲಾಗಿದ್ದಾರೆ. ಶಾಸಕರು ಮತ್ತು ಸರ್ಕಾರದ ಮೊಂಡುತನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
PublicNext
26/01/2022 10:26 am