ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : Rapido ಕಂಪನಿ ವಿರುದ್ಧ ಆಟೋ ಚಾಲಕರ ದೂರು

ಬೆಂಗಳೂರು : Rapido ವಾಹನಗಳ ಹಾವಳಿ ತಪ್ಪಿಸಲು ಆಟೋ ಚಾಲಕರು ನಿತ್ಯ ಸರ್ಕಸ್ ಮಾಡುವಂತಾಗಿದ್ದು, ಸದ್ಯ ಸಾರಿಗೆ ಸಚಿವ ಹಾಗೂ ಸಾರಿಗೆ ಆಯುಕ್ತರಿಗೆ Rapido ಸಂಸ್ಥೆ ವಿರುದ್ಧ ಆಟೋ ಚಾಲಕರು ದೂರು ನೀಡಿದ್ದಾರೆ.

ಇಂದು ನಗರದ ಹಲವು ರಸ್ತೆಗಳಲ್ಲಿ ಜಾಥಾ ನಡೆಸಿದ ಆಟೋ ಚಾಲಕರು ಬಳಿಕ ಸಾರಿಗೆ ಆಯುಕ್ತರ ಕಚೇರಿಗೆ ತೆರಳಿ ದೂರು ಸಲ್ಲಿಸಲಿದ್ದಾರೆ.

ವೈಟ್ ಬೋರ್ಡ್ ವಾಹನಗಳಿಗೆ ಕಮರ್ಷಿಯಲ್ ಸಾಗಾಟ ಮಾಡಲು ಅವಕಾಶ ಇಲ್ಲ. ಕಡಿಮೆ ಬೆಲೆಗೆ ಬೈಕ್ ಮೂಲಕ ಕಮರ್ಷಿಯಲ್ ಸಾಗಾಟ ನಡೆಯುತ್ತಿದೆ. ಇದು ಅಪರಾಧ. ಹೀಗಾಗಿ ಎಲ್ಲೋ ಬೋರ್ಡ್ ಇರುವ ಆಟೋಗಳಿಗೆ ಇದರಿಂದ ಸಮಸ್ಯೆ ಆಗುತ್ತಿದೆ ಎಂದು ಆಟೋ ಚಾಲಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

24/01/2022 05:17 pm

Cinque Terre

356

Cinque Terre

0

ಸಂಬಂಧಿತ ಸುದ್ದಿ