ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಸಚಿವ ಸಂಪುಟ ವಿಚಾರ: ಸಿಎಂ ಏನ್ ಹೇಳಿದ್ರು ಗೊತ್ತೇ ?

ಬೆಂಗಳೂರು: ರಾಜ್ಯ ಸಚಿವ ಸಂಪುಟದ ಬಗ್ಗೆ ಈಗ ಭಾರಿ ಚರ್ಚೆ ಶುರು ಆಗಿದೆ. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯಕ್ಕೆ ನಾಲ್ಕು ಸ್ಥಾನಗಳು ಖಾಲಿ ಇವೆ. ಇವುಗಳ ಭರ್ತಿಗೆ ವರಿಷ್ಠರ ಜೊತೆಗೆ ಚರ್ಚಿಸಬೇಕಿದೆ. ವರಿಷ್ಠರು ಕರೆದರೆ ದೆಹಲಿಗೆ ಹೋಗುತ್ತೇನೆ. ದೆಹಲಿ ಭೇಟಿ ಬಳಿಕ ಈ ಬಗ್ಗೆ ತೀರ್ಮಾನ ಮಾಡುವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಕೋವಿಡ್ ಬಗ್ಗೆ ಕೆಲವು ನಿರ್ಣಯಗಳನ್ನ ಮಾಡಿದ್ದೇವೆ. ಈಗಷ್ಟೇ ಕೋವಿಡ್ ನಿಯಮ ಸಡಿಲಕೆ ಮಾಡಿದ್ದೇವೆ.ಯಾವುದೇ ನಿಯಮ ಇದ್ದರೂ ಅಧ್ಯಯನ ನಡೆಸಿಯೇ ಕ್ರಮ ತೆಗೆದುಕೊಳ್ಳುತ್ತೇವೆ ಅಂತಲೇ ವಿವರಿಸಿದ್ದಾರೆ ಬಸವರಾಜ್ ಬೊಮ್ಮಾಯಿ.

Edited By : Shivu K
PublicNext

PublicNext

24/01/2022 01:07 pm

Cinque Terre

19.79 K

Cinque Terre

0

ಸಂಬಂಧಿತ ಸುದ್ದಿ