ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: "ಶಾಂತಿ ಬದಲು ಕ್ರಾಂತಿಕಾರಿ ಯುವಶಕ್ತಿ ಮೇಲೆ ನಂಬಿಕೆ ಇಟ್ಟವರು ನೇತಾಜಿ"

ಯಲಹಂಕ: ಭಾರತದ ಯುವಶಕ್ತಿ ಮೇಲೆ ಅಪಾರ ನಂಬಿಕೆ ಇಟ್ಟವರು ನೇತಾಜಿ ಸುಭಾಷ್ ಚಂದ್ರ ಬೋಸ್. ಬ್ರಿಟಿಷರ ವಿರುದ್ಧ ಶಾಂತಿಯುತವಾಗಿ ʼದಮ್ಮಯ್ಯʼ ಎಂದರೆ ಸ್ವಾತಂತ್ರ್ಯ ಕೊಡ್ತಾರೆಯೇ ? ಆದ್ದರಿಂದಲೇ ನೇತಾಜಿ, ಕ್ರಾಂತಿಕಾರಿ ಧೋರಣೆ ಮೈಗೂಡಿಸಿಕೊಂಡು ಹೋರಾಟಕ್ಕಿಳಿದರು. ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದರಂತೆಯೇ ನೇತಾಜಿ ಹೋರಾಟ ನಡೆಸಿದರು ಎಂದು ಯಲಹಂಕ ಶಾಸಕ, BDA ಅಧ್ಯಕ್ಷರೂ ಆದ S.R.ವಿಶ್ವನಾಥ್ ಬಣ್ಣಿಸಿದರು.

ಯಲಹಂಕದಲ್ಲಿ ನೇತಾಜಿಯವರ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು, ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ದೇಶ ಬಿಟ್ಟು, ಸಿಂಗಾಪುರದಲ್ಲಿ ಅಜಾದ್ ಹಿಂದ್ ಫೌಜ್ ಕಟ್ಟಿದವರು ಸುಭಾಷ್ ಚಂದ್ರ ಬೋಸ್. ಮಹಿಳೆಯರಿಗಾಗಿ ಪ್ರತ್ಯೇಕ ಮಹಿಳಾ ತುಕಡಿ ರಚಿಸಿ ಸ್ವಾತಂತ್ರ್ಯದ ಹೋರಾಟಕ್ಕೆ ಯುವ ಹೆಣ್ಣುಮಕ್ಕಳನ್ನು ಸಿದ್ಧಪಡಿಸಿದ್ದರು.

"ನನಗೆ ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ‌ಕೊಡಿಸುತ್ತೇನೆ" ಎನ್ನುತ್ತಾ Indian National Army ಕಟ್ಟಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು ನೇತಾಜಿ. ತಮ್ಮ ಉಸಿರಿರುವವರೆಗೂ ದೇಶದ ಸ್ವಾತಂತ್ರ್ಯಕ್ಕಾಗಿ ತನು, ಮನ, ಧನದಿಂದ ದುಡಿದವರು ನೇತಾಜಿ. ಇಂತಹ ಮಹಾನ್ ಹೋರಾಟಗಾರ ಯುವಜನತೆಗೆ ಆದರ್ಶ ಎಂದರು. ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದು, ನೇತಾಜಿಗೆ ನಮನ ಸಲ್ಲಿಸಿದರು.

Edited By : Shivu K
Kshetra Samachara

Kshetra Samachara

24/01/2022 12:38 pm

Cinque Terre

692

Cinque Terre

0

ಸಂಬಂಧಿತ ಸುದ್ದಿ