ಬೆಂಗಳೂರು: ರಾಜ್ಯ ಸರ್ಕಾರ ಮೊದಲು ಜನರಿಗೆ ಅನುಕೂಲವಾಗುವ ರೂಲ್ಸ್ ಮಾಡಲಿದೆ.ಅದು ಬಿಟ್ಟ ಕೊರೊನಾ ಕೇಸ್ ಇದ್ದಾಗ ಫ್ರೀ ಬಿಟ್ಟರು. ಕೇಸ್ ಇಲ್ಲದೇ ಇದ್ದಾಗ ಕರ್ಫ್ಯೂ ಹೇರಿದರು. ಹೀಗೇ ಆದರೇ ಏನು ಉಪಯೋಗ. ಈಗ ನೋಡಿದ್ರೆ ನೀರು,ವಿದ್ಯುತ್,ಹಾಲು,ಸಾರಿಗೆ ದರ ಹೆಚ್ಚಳಕ್ಕೆ ಮುಂದಾಗಿಯದೇ. ಇದೆಷ್ಟು ಸರಿ ಅಂತಲೇ ಪ್ರಶ್ನೆ ಮಾಡಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್.
ಸರ್ಕಾರ ಮೊದಲು ಜನರಿಗೆ ಆದಾಯ ಬರೋ ಕೆಲಸ ಮಾಡಲಿ. ಆ ಮೇಲೆ ಅವಶ್ಯಕ ವಸ್ತುಗಳ ದರವನ್ನ ಏರಿಸೋ ಕೆಲಸ ಮಾಡಲಿ. ಅದು ಬಿಟ್ಟು ಈಗ ದರ ಏರಿಕೆ ಮಾಡೋಕೆ ಮುಂದಾದರೆ ಜನರಿಗೆ ತೊಂದರೆ ಆಗುತ್ತದೆ. ಇದು ಸರಿಯಾದ ಕ್ರಮ ಅಲ್ಲ ಅಂತಲೇ ಟೀಕಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್.
ಸರ್ಕಾರ ಕೋವಿಡ್ ನಿಯಂತ್ರಣಕ್ಕೆ 50-50 ರೂಲ್ಸ್ ಮಾಡಿದೆ. ಆದರೆ ಲಂಡನ್ ನಂತಹ ದೇಶದಲ್ಲಿ ಈ ರೀತಿ ಏನೂ ಇಲ್ಲ. ಜನರನ್ನ ಫ್ರೀ ಬಿಟ್ಟಿದ್ದಾರೆ. ಪಕ್ಕದ ಆಂಧ್ರ ಮತ್ತು ತೆಲಂಗಾಣದಲ್ಲಿ ಈ ರೀತಿಯ ರೂಲ್ಸ್ ಜಾರಿಗೆ ತರಲಾಗಿಯೇ ಇಲ್ಲ ಎಂದು ಹೇಳಿದ್ದಾರೆ ಡಿಕೆ ಶಿವಕುಮಾರ್.
PublicNext
22/01/2022 03:51 pm