ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ದೊಡ್ಡತುಮಕೂರು ಕೆರೆ ಒಡಲಿಗೆ ʼವಿಷʼ ; ಹೋರಾಟಕ್ಕೆ ಮುಂದಾದ ಜನ

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಪ್ರಮುಖ ಕೆರೆಗಳಲ್ಲೊಂದು ದೊಡ್ಡತುಮಕೂರು ಕೆರೆ. 320 ಎಕರೆ ವಿಸ್ತೀರ್ಣದ ಈ ಕೆರೆ 25 ಗ್ರಾಮಗಳಿಗೆ ಆಸರೆಯೂ ಹೌದು. ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು, ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶದ ತ್ಯಾಜ್ಯ ನೀರು ಶುದ್ಧೀಕರಣವಾಗದೆ ನೇರ ಕೆರೆ ಒಡಲು ಸೇರುತ್ತಿದೆ. ಕೆರೆ ನೀರಿನಲ್ಲಿ ಪ್ಲೋರೈಡ್, ಮೆಗ್ನಿಶಿಯಂ , ಯುರಿಯಾ ಅಂಶ ಪತ್ತೆಯಾಗಿದ್ದು, ಈ ನೀರನ್ನು ಬಳಸದಂತೆ ಲ್ಯಾಬ್ ವರದಿಯಲ್ಲಿ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಕೆರೆ ಉಳಿವಿಗಾಗಿ ದೊಡ್ಡತುಮಕೂರು ಕೆರೆ ಸಂರಕ್ಷಣಾ ವೇದಿಕೆ ರಚನೆಯಾಗಿದ್ದು, ʼನಮ್ಮಕೆರೆ- ನಮ್ಮ ಹಕ್ಕುʼ ಘೋಷಣೆಯೊಂದಿಗೆ ಜನ ಕೆರೆಯ ರಕ್ಷಣೆಗೆ ಮುಂದಾಗಿದ್ದಾರೆ. ಕೆರೆ ಅಂಚಿನ ಗೌಡಹಳ್ಳಿ, ದೊಂಬರಹಳ್ಳಿ, ಬೈರಸಂದ್ರಪಾಳ್ಯ, ಗೆಜ್ಜಿಗದಹಳ್ಳಿ, ಕರೀಂಸೊಣ್ಣೆನಹಳ್ಳಿ ಯಲ್ಲಿ ಜನಜಾಗೃತಿ ಸಭೆ ಮಾಡಲಾಗುತ್ತಿದೆ. ತ್ಯಾಜ್ಯ ನೀರನ್ನು ಕೆರೆಗೆ ಬಿಡದಂತೆ ಒತ್ತಾಯಿಸಿ ಗ್ರಾಮಸ್ಥರು ಒಂದಾಗಿ ಹೋರಾಟಕ್ಕೆ ಇಳಿದಿದ್ದಾರೆ. ದೊಡ್ಡತುಮಕೂರಿನ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯ ಡಾ.ಟಿ.ಹೆಚ್. ಅಂಜಿನಪ್ಪ ಕೂಡ ಹೋರಾಟಕ್ಕೆ ಧುಮುಕಿರುವುದು ಹೋರಾಟಗಾರರಲ್ಲಿ ಅತ್ಯುತ್ಸಾಹ ತುಂಬಿದೆ.

Edited By : Nagesh Gaonkar
Kshetra Samachara

Kshetra Samachara

12/01/2022 11:03 pm

Cinque Terre

1.17 K

Cinque Terre

0

ಸಂಬಂಧಿತ ಸುದ್ದಿ