ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಇದು ಪಕ್ಷಾತೀತ ನಡಿಗೆ; ಎಂಎಲ್ಸಿ ಕಾಂತರಾಜು

ನೆಲಮಂಗಲ: ಪಾದಯಾತ್ರೆ ಮಾಡ್ತಿರೋದು ಪಕ್ಷಕ್ಕೆ ಸೀಮಿತವಲ್ಲ, ಪಕ್ಷಾತೀತ ನಡಿಗೆಯೊಂದಿಗೆ ಹೆಜ್ಜೆ ಹಾಕಲು ಸಿದ್ಧವಾಗಿದ್ದೇನೆ. ಈ ಯೋಜನೆ ಕುಡಿಯುವ ನೀರಿನ ವಿಚಾರ ಆಗಿರುವುದರಿಂದ ನಮ್ಮ‌ ನಾಡು, ನಮ್ಮ ದೇಶದ ಹೆಮ್ಮೆ ಆಗಿರೋದ್ರಿಂದ ನಾವು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮದು ಒಂದು ಹೆಜ್ಜೆ ಇರಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ.

ಅಷ್ಟೇ ಅಲ್ಲ, ತುರುವೇಕರೆಯಲ್ಲೂ ಸಹ ನನಗೆ 5000 ಜನ ಕರೆದುಕೊಂಡು ಬರಲು ಹೇಳಿದ್ದಾರೆ. ಆ ಕೆಲಸ ನಾನು ಮಾಡೇ ಮಾಡ್ತೇನೆ.

ನೆಲಮಂಗಲದಿಂದ ಕಡಿಮೆ ಅಂದ್ರು 10,000 ಜನ ಪಾದಯಾತ್ರೆಗೆ ಹೋಗಲು ನಾನು ಸಹಕರಿಸುತ್ತೇನೆ.

ಸಮಾರೋಪಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. ಆದ್ರೆ ಎಲ್ಲರೂ

ಸ್ವಇಚ್ಛೆಯಿಂದ ಪಾದಯಾತ್ರೆಗೆ ಹೋಗುವ ಕೆಲಸ ಮಾಡೋಣ ಎಂದು ನೆಲಮಂಗಲದಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಎಂಎಲ್ಸಿ ಬಿಎಂಎಲ್ ಕಾಂತರಾಜು ಹೇಳಿದರು.

Edited By : Shivu K
Kshetra Samachara

Kshetra Samachara

05/01/2022 07:09 pm

Cinque Terre

780

Cinque Terre

0

ಸಂಬಂಧಿತ ಸುದ್ದಿ