ನೆಲಮಂಗಲ: ನಮ್ಮದೇ ನೀರು ನಮ್ಮ ಹಕ್ಕು, ತಮಿಳುನಾಡಿಗೆ ಹೋಗುವ ನೀರನ್ನ ಹೊರತುಪಡಿಸಿ ಹೆಚ್ಚುವರಿ ನೀರನ್ನ ಸಂಗ್ರಹಿಸಲು ಮಾತ್ರ ನಾವು ಅಣೆಕಟ್ಟು ಕಟ್ಟಲು ಕೇಳುತ್ತಿದ್ದೇವೆ. ಇದು ಕಾಂಗ್ರೆಸ್ ಸರ್ಕಾರದಲ್ಲಿ ಡಿಪಿಆರ್ ಮಾಡಿದ್ದು. ರಾಜ್ಯದಲ್ಲಿನ 27 ಬೃಹತ್ ಅಣೆಕಟ್ಟುಗಳಲ್ಲಿ 20 ಅಣೆಕಟ್ಟು ಕಟ್ಟಿರೋದು ಕಾಂಗ್ರೆಸ್ ಮಾತ್ರ. 21ನೇ ಡ್ಯಾಂ ಕೂಡ ಕಾಂಗ್ರೆಸ್ ಪಕ್ಷನೇ ಕಟ್ಟುತ್ತೇ ಇದು ಶತಸಿದ್ಧ.
ಜನರು ಉದ್ಯೋಗ ಕಳ್ಕೊಂಡು ಬೀದಿಗೆ ಬಂದಿದ್ದಾರೆ. ಮೋದಿಗೆ ಹೋಗಿ ಉದ್ಯೋಗ ಕೇಳಿದ್ರೆ ಪಕೋಡಾ ಮಾರು, ಬಜ್ಜಿ ಮಾರು ಅಂತಾರೆ! ಪಂಚೇಂದ್ರಿಯಗಳನ್ನ ಕಳ್ಕೊಂಡಿರೋ ಸರ್ಕಾರನೇ ಈ ಬಿಜೆಪಿ ಸರ್ಕಾರ.
ಸರ್ಕಾರ, ಈ ಕಾರ್ಯಕ್ರಮದಿಂದ ಹೆದರಿಕೊಂಡು ಒಮಿಕ್ರಾನ್ ಹಿಡ್ಕೊಂಡಿದ್ದಾರೆ. ಪಾದಯಾತ್ರೆ ಪಾಸಿಟಿವ್ ಸಂಖ್ಯೆ ಡಬಲ್ ಮಾಡ್ತಾ ಇದ್ದರೆ, ಯುಪಿಯಲ್ಲಿ ಮೋದಿ, ಅಮಿತ್ ಶಾ rally ಮಾಡಿದಾಗ ಕೊರೊನಾ ಬರಲ್ವ?
ರಾಜ್ಯಾದ್ಯಂತ ಬಿಜೆಪಿ ನಶಿಸಿ ಹೋಗುತ್ತಿದೆ. ಇನ್ನೊಂದು ಪಕ್ಷದ ಬಗ್ಗೆ ಮಾತನಾಡದೇ ಇರೋದೇ ಒಳ್ಳೆದು, ಸುಮ್ಮನೆ ಯಾಕೆ ಅವರಿಗೆ ನಾವು ಮಾರ್ಕೆಟಿಂಗ್ ಮಾಡ್ಬೇಕು ಎಂದು ನೆಲಮಂಗಲದಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
Kshetra Samachara
05/01/2022 07:02 pm