ನೆಲಮಂಗಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಕರೆ ಹಿನ್ನೆಲೆಯಲ್ಲಿ ಬೆಂ.ಗ್ರಾ. ಜಿಲ್ಲಾಧ್ಯಕ್ಷ ಮುನಿಸ್ವಾಮಿ ಹಾಗೂ ಎಂಎಲ್ಸಿ ಎಸ್.ರವಿ ನೇತೃತ್ವದಲ್ಲಿ ನಗರದ ಹಾಲಿಡೇ ಫಾಮ್ಸ್ ರೆಸಾರ್ಟ್ ನಲ್ಲಿ ಪೂರ್ವಭಾವಿ ಸಭೆ ಜರುಗಿತು.
ಹಿರಿಯ ಮುಖಂಡ, ಮಾಜಿ ಸಚಿವ ಅಂಜನಮುರ್ತಿ, ಎಂಎಲ್ಸಿ ಬಿಎಂಎಲ್ ಕಾಂತರಾಜು ಸಹಿತ ಸ್ಥಳೀಯ ಕಾಂಗ್ರೆಸ್ ಮುಖಂಡರು, ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ಜಿಪಂ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಭಾಗಿಯಾಗಿದ್ದರು.
ಈ ಸಂದರ್ಭ ಎಂಎಲ್ಸಿ ಎಸ್.ರವಿ ಮಾತನಾಡಿ, ನೆಲಮಂಗಲ ಕ್ಷೇತ್ರದಿಂದ ಪಾದಯಾತ್ರೆಯಲ್ಲಿ 10 ಸಾವಿರ ಜನ ಪಾಲ್ಗೊಳ್ತಾರೆ. ನೆಲ, ಜಲ ವಿಚಾರದ ಹೋರಾಟದಲ್ಲಿ ನೆಲಮಂಗಲ ಯಾವಾಗಲೂ ಮುಂಚೂಣಿಯಲ್ಲಿರುತ್ತೆ. ಬಿಜೆಪಿ ಸರ್ಕಾರ ಹಳೆ ಮೈಸೂರು ಭಾಗದ ಅಭಿವೃದ್ಧಿ, ಎತ್ತಿನಹೊಳೆ ಯೋಜನೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದರ ವಿರುದ್ಧ ನಮ್ಮ ಹೋರಾಟವಿದು ಎಂದರು.
ಕೊರೊನಾ, ಒಮಿಕ್ರಾನ್ ಕೇಸ್ ಕಳೆದೆರಡು ದಿನಗಳ ಹಿಂದೆ 200, 300 ಇದ್ದದ್ದು, ಈಗ ದಿಢೀರ್ 3 ಸಾವಿರಕ್ಕೆ ಉಲ್ಭಣ ಹೇಗಾಯ್ತೋ ಗೊತ್ತಾಗ್ತಿಲ್ಲ. ಈ ಅಂಕಿ ಅಂಶ ಶುದ್ಧ ಸುಳ್ಳು, ಮೋದಿ ಯುಪಿಯಲ್ಲಿ ಸಾವಿರಾರು ಜನ್ರನ್ನ ಒಟ್ಟುಗೂಡಿಸಿ ಸಮ್ಮೇಳನ ಮಾಡಬಹುದು. ಆದ್ರೆ, ಕಾಂಗ್ರೆಸ್ಸಿಗರು ನೆಲ, ಜಲ ಸಂರಕ್ಷಣೆಗೆ ಬೀದಿಗಿಳಿದ್ರೆ ಕೊರೊನಾ ಏರಿಕೆ ಆಗುತ್ತಾ? ಇದೊಂದು ರಾಜಕೀಯ ಸಂಚು ಎಂದು ಹರಿಹಾಯ್ದರು.
Kshetra Samachara
05/01/2022 06:53 pm