ಬೆಂಗಳೂರು: ಬಿಜೆಪಿಯ ಎಲ್ಲ ಕಾರ್ಯಕರ್ತರಿಗೆ ಅಭಿನಂಧನೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿಗಳ ಮುಂದೆ ಸಚಿವರು ನಡವಳಿಕೆ ಮಾಡಿದ್ದನ್ನು ಸಮರ್ಥನೆ ಮಾಡಿಕೊಳ್ತಿದ್ದಾರೆ. ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳೇ ಸಚಿವರಿಗೆ ಬಾಷಣ ಮಾಡಿದ್ದು ಸಾಕು ಎಂದು ಕೈಸನ್ನೆ ಮೂಲಕ ಸೂಚನೆ ನೀಡಿದ್ದಾರೆ. ಆದರೂ ಅವರು ನಿಲ್ಲಿಸಲಿಲ್ಲ. ಇದು ರಾಜ್ಯದ ಜನಕ್ಕೆ ಅವಮಾನ ಬರುವ ರೀತಿಯ ವರ್ತನೆ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಬ್ಬ ಮಂತ್ರಿ ಅನವಶ್ಯಕವಾಗಿ ಸಭೆಯನ್ನು ಹೊರತುಪಡಿಸಿ ಮಾತಾಡಿದ್ದಾರೆ. ನಾವು ಬಿಜೆಪಿಯವರು, ನಾವು ಆಡೋದೇ ಹಿಂಗೆ, ಗಂಡಸಿದ್ರೆ ಬನ್ನಿ ಎಂದು ಮಾತಾಡುತ್ತಾರೆ. ಇದು ನನಗೆ ಮಾಡಿದ ಅಪಮಾನ ಅಲ್ಲ. ರಾಮನಗರ ಜನಕ್ಕೆ ಮಾಡಿದ ಅಪಮಾನ, ನಾಡಪ್ರಭು ಕೆಂಪೇಗೌಡ ರಿಗೆ ಮಾಡಿದ ಅವಮಾನ. ಅವರ ರಾಜ್ಯದ ಅಧ್ಯಕ್ಷರಿಗೆ ನಾನು ಕೇಳಲು ಬಯಸುತ್ತೇನೆ. ಸರ್ಕಾರದ ಕಾರ್ಯಕ್ರಮದಲ್ಲಿ ಇಂತಾ ಮಾತುಗಳು ಸರಿಯೇ? ಒಬ್ಬ ಸಿಎಂ ಮುಂದೆ, ಆ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಮುಂದೆ ಅವರು ಮಾಡಿದ್ದು ಸರಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವರು ಏಕವಚನದಲ್ಲಿ ಮಾತನಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುರೇಶ್, ಬಿಜೆಪಿಯ ಅಜೆಂಡಾನೇ ಪ್ರಚೋದನೆ ಮತ್ತು ಭಾವನಾತ್ಮಕವಾಗಿ ಮಾತನಾಡುವುದು. ಅಭಿವೃದ್ಧಿ ಕೆಲಸಗಳ ಬಗ್ಗೆ ಬಿಜೆಪಿಗೆ ಚಿಂತೆಯಿಲ್ಲ. ಪ್ರಚೋದನೆ ಭಾಷಣ ಮಾಡಿ ಅಧಿಕಾರಕ್ಕೆ ಬರ್ತಾರೆ. ಈ ರೀತಿಯಲ್ಲಿ ಭಾಷಣ ಮಾಡಿದ್ರೆ ಯುವಕರಿಗೆ ಯಾವ ಸಂದೇಶ ನಿಡ್ತಾರೆ ಎಂದ ಸುರೇಶ್ ಅಶ್ವಥ್ ನಾರಾಯಣ ಭಾಷೆ ಬಳಕೆ ಬಗ್ಗೆ ಕಿಡಿ ಕಾರಿದ್ದಾರೆ.
PublicNext
04/01/2022 04:13 pm