ಬೆಂಗಳೂರು: ಇದೇ ಜನವರಿ 9 ರಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಮಾಜಿ ಸಚಿವ ಅಂಜನಮೂರ್ತಿ ನೇತೃತ್ವದಲ್ಲಿ ಇಂದು ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕಾಂಗ್ರೇಸ್ ಪಾರ್ಟಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ಇನ್ನೂ ಸುದ್ಧಿಗೋಷ್ಠಿ ಉದ್ದೇಶಿಸಿ ಮಾಜಿ ಸಚಿವ ಅಂಜನಮೂರ್ತಿ, ಕಾವೇರಿಗೆ ನೀರು ನಮ್ಮ ತಾಯಿ, ಬಯಲು ಸೀಮೆಗೆ ಕಾವೇರಿ ನೀರು ತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಪ್ರತಿಯೊಂದು ಹಂತದಲ್ಲೂ ಡಿಕೆ ಶಿವಕುಮಾರ್ ಅವರಿಗೆ ಕೈಜೋಡಿಸಿ ಹೆಜ್ಜೆ ಸೇರಿಸಿ ಹೋರಾಟ ಮಾಡೋಣ. ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಿದರೆ ಈ ಭಾಗದ ಜನರಿಗೂ ಅನುಕೂಲ ಆಗುತ್ತದೆ. ಮೇಕೆದಾಟು ನೀರು, ತಮಿಳುನಾಡು ಮುಖಾಂತರ ಸಮುದ್ರಕ್ಕೆ ಸೇರುತ್ತಿದ್ದು ನೀರು ಸಾಕಷ್ಟು ವ್ಯರ್ಥವಾಗುತ್ತಿದೆ.
ನೀರಿನ ಸಮಸ್ಯೆಗಳು ಎದುರಾಗದಂತೆ ಆ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ದೂರ ದೃಷ್ಠಿ ಇಟ್ಟಕೊಂಡು ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡಬೇಕಿದೆ. ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ಜೀವನ ಸಾಗಿಸುತ್ತಿದ್ದು ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಿದೆ. ಅದ್ದರಿಂದ ಬೆಂಗಳೂರಿಗೆ ಸೇರಿದಂತೆ ವಿವಿಧ ಭಾಗಗಳಿಗೆ ನೀರು ಪೂರೈಸಲು ಈ ಯೋಜನೆ ಕೈಗೊಳ್ಳಬೇಕಿದೆ. ನಮ್ಮ ನೀರು ನಮ್ಮ ಹಕ್ಕು ಶೀರ್ಷಿಕೆಯಡಿ ಮೇಕೆದಾಟು ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಜ.9 ರಿಂದ 19ರವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಕಾವೇರಿ ನದಿ ನಮ್ಮ ತಾಯಿಗೆ ಸಮ, ಕಾವೇರಿ ಉಳಿವಿಗಾಗಿ ನಾವಿಲ್ಲೇ ಹೋರಾಟ ಮಾಡಬೇಕಿದೆ. ಜಿಲ್ಲಾಪಂಚಾಯಿತಿ ಮಟ್ಟದಿಂದ ಮೇಕೆದಾಟು ಪಾದಯಾತ್ರೆಗೆ ಗ್ರಾಮ ಪಂಚಾಯಿತಿ ಮಟ್ಟದಿಂದ ಕಾರ್ಯಕರ್ತರು ಆಗಮಿಸುತ್ತಿದ್ದು ಈಗಾಗಲೇ ಬ್ಲಾಕ್ ಸಮಿತಿ ಪಟ್ಟಿ ಮಾಡಿದೆ. ತಾಲೂಕಿನಾದ್ಯಂತ ಸುಮಾರು ೫ಸಾವಿರಕ್ಕೂ ಹೆಚ್ಚು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯಾದ್ಯಂತ ಸಾವಿರಾರು ಮಂದಿ ಪಕ್ಷಾತೀತವಾಗಿ ಭಾಗವಹಿಸಲಿದ್ದಾರೆ ಎಂದರು.
Kshetra Samachara
02/01/2022 11:25 pm