ಬೆಂಗಳೂರು: ಇಡೀ ದೇಶದಲ್ಲಿ ಕೋವಿಡ್ ಕೇಸ್ ಹೆಚ್ಚಾ_ಗುತ್ತಲೇ ಇವೆ. ಸದ್ಯದ ಪರಿಸ್ಥಿತಿಗೆ ತಕ್ಕನಾಗಿಯೇ ಕೆಲವು ಸೂಕ್ತ ವ್ಯವಸ್ಥೆಯನ್ನ ಮಾಡಿಕೊಂಡಿದ್ದೇವೆ.ಮುಂದಿನ ದಿನಗಳಲ್ಲಿ ಕೇಸ್ ಗಳನ್ನ ಗಮನದಲ್ಲಿ ಇಟ್ಟುಕೊಂಡೇ ಔಷಧಿಗಳು, ಆರೋಗ್ಯ ವ್ಯವಸ್ಥೆ, ಬೆಡ್ ಗಳು, ಐಸಿಯುಗಳ ವ್ಯವಸ್ಥೆ ಮಾಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಮ್ಮ ರಾಜ್ಯ ಕೋವಿಡ್ ಕೇಸ್ ಹೆಚ್ಚಾದ ರಾಜ್ಯಗಳಲ್ಲಿ 8 ನೇ ಸ್ಥಾನದಲ್ಲಿಯ ಇದೆ. ಈಗಾಗಲೇ ನಾವು ಸರ್ಕಾರದಿಂದ ಹಲವು ಮುಂಜಾಗ್ರತೆ ತೆಗೆದುಕೊಂಡಿದ್ದೇವೆ. ಆಕ್ಸಿಜನ್ ಬೆಡ್ ಗಳು, ಆರೋಗ್ಯ ಸೌಕರ್ಯಗಳನ್ನು ಕೈಗೊಂಡಿದ್ದೇವೆ ಎಂದಿದ್ದಾರೆ ಸಿಎಂ ಬಸವರಾಜ್ ಬೊಮ್ಮಾಯಿ.
PublicNext
31/12/2021 03:33 pm