ಬೆಂಗಳೂರು: ಮನವಿ ಸ್ಪಂದಿಸಿದ ಕನ್ನಡಪರ ಸಂಘಟನೆಗಳ ನಾಯಕರು ಡಿಸೆಂಬರ್ 31ರಂದು ರಾಜ್ಯ ಬಂದ್ ಮಾಡುವ ನಿರ್ಧಾರ ವಾಪಸ್ ಪಡೆದಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮನವೊಲಿಕೆ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ನನ್ನ ಮನವಿಗೆ ಒಪ್ಪಿ ಬಂದ್ ವಾಪಸ್ ಪಡೆದಿದ್ದಾರೆ. ಬಂದ್ ವಾಪಸ್ ಪಡೆದ ಹೋರಾಟಗಾರರಿಗೆ ಧನ್ಯವಾದಗಳು. ನಾಳೆ ಬಂದ್ ಇರೋದಿಲ್ಲ. ಎಂದಿನಂತೆ ವ್ಯಾಪಾರ-ವಹಿವಾಟು ನಡೆಯಲಿದೆ ಎಂದು ತಿಳಿಸಿದರು.
ಎಂಇಎಸ್ ನಿಷೇಧದ ಬಗ್ಗೆ ನಿರ್ಧಾರ ತಿಳಿಸಲಾಗಿದೆ. ಕಾನೂನು ಬದ್ಧವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ರಾಜ್ಯದ ಗಡಿ ಕನ್ನಡಿಗರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಬೊಮ್ಮಾಯಿ ಇದೇ ವೇಳೆ ತಿಳಿಸಿದರು.
PublicNext
30/12/2021 09:32 pm