ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.31ರ ವಾಟಾಳ್ ಬಂದ್ ಕರೆ ಆಗುತ್ತಾ ಠುಸ್ಸ್ ಪಟಾಕಿ.?

ಬೆಂಗಳೂರು: ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಡಿ.31 ಕರೆ ನೀಡಿರುವ ಬಂದ್ ಗೆ ಕನ್ನಡ ಪರ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಪ್ರಾರಂಭದಲ್ಲಿ ಬಂದ್ ಗೆ ಬೆಂಬಲ ನೀಡಿತ್ತು. ಆದರೆ ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ತಮ್ಮ ಅಭಿಪ್ರಾಯ ಬದಲಿಸಿದೆ.

ನ್ಯೂ ಇಯರ್ ಸೆಲೆಬ್ರೆಷನ್ ಮೂಡ್ ನಲ್ಲಿ ಇರುವ ಜನರಿಗೆ ಬಂದ್ ನಿಂದ ತೊಂದರೆ ಆಗಲಿದೆ. ಬದಲಾಗಿ ಹೋರಾಟದ ಮೂಲಕ ಬೇಡಿಕೆ ಈಡೇರಿಸಬಹುದು ಎಂಬ ಅಭಿಪ್ರಾಯಕ್ಕೆ ಕರವೇ ಪ್ರವೀಣ್ ಶೆಟ್ಟಿ ಬಣ ಬಂದಿದೆ.

ಇವರಿಗೆ ಮತ್ತಷ್ಟು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿದು ಬಂದಿದೆ.

ಹೀಗಾಗಿ ಡಿ.31 ರಂದು ನಡೆಯುವ ಬಂದ್ ಗೆ ಬೆಂಬಲ ಕೊರತೆ ಎದುರಾಗಿದ್ದು, ವಾಟಾಳ್ ನಾಗರಾಜ್ ಕರೆ ಠುಸ್ಸ್ ಪಟಾಕಿ ಆಗುವ ಲಕ್ಷಣಗಳು ಕಂಡು ಬರ್ತಿದೆ.

Edited By :
PublicNext

PublicNext

29/12/2021 11:55 am

Cinque Terre

12.7 K

Cinque Terre

3

ಸಂಬಂಧಿತ ಸುದ್ದಿ